ಇತರೆ

ಚಳಿಯನ್ನು ನಿಗ್ರಹಿಸಲು ​​ಬೆಡ್​ರೂಮ್​ನಲ್ಲಿ ಕಾಯಿಲ್ ಹೀಟರ್ ಹಾಕಿ ಮಲಗಿದ್ದ ಇಬ್ಬರು ಉಸಿರುಗಟ್ಟಿ ಸಾವು

Views: 46

ರಾತ್ರಿಯ ಚಳಿಯನ್ನು ನಿಗ್ರಹಿಸಲು ಬೆಡ್​ರೂಮ್​ನಲ್ಲಿ ಕಾಯಿಲ್ ಹೀಟರ್ ಹಾಕಿಕೊಂಡು ನಿದ್ರಿಸಿದ್ದ ತಂದೆ ಮತ್ತು ಮಗ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ ರಾಜ್ಯದ ನೋಯ್ಡಾದ ಮನೆಯೊಂದರಲ್ಲಿ ನಡೆದಿದೆ.

ಘಟನೆಯಲ್ಲಿ ಮಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಛಿಜಾರ್ಸಿ ಪ್ರದೇಶದಲ್ಲಿನ ಮನೆಯೊಂದರಲ್ಲಿ ಮೂವರು ತಮ್ಮ ಕೋಣೆಯಲ್ಲಿ ಕಾಯಿಲ್ ಹೀಟರ್ ಹಾಕಿಕೊಂಡು ಮಲಗಿದ್ದರು. ಈ ಹೀಟರ್​ನಿಂದ ಕಾರ್ಬನ್ ಮಾನಾಕ್ಸೈಡ್ ಹೊಗೆ ಬಿಡುಗಡೆಯಾಗಿ ಉಸಿರುಗಟ್ಟಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಗ್ಗೆ ಮನೆಯವರಿಗೆ ಯಾವುದೇ ಚಟುವಟಿಕೆ ಕಂಡು ಬರದ ಹಿನ್ನೆಲೆ ನೆರೆಹೊರೆಯವರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿ, ಅವನ ಮಗ ಹಾಗೂ ಮಗಳು ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಿದ್ದನ್ನು ನೀಡಿದ ನೆರೆಹೊರೆಯವು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಸಿದ್ದಾರೆ. ಆದರೆ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದು, ಯುವತಿಗೆ ಚಿಕಿತ್ಸೆ ಮುಂದುವರಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Related Articles

Back to top button