ಗೃಹಲಕ್ಷ್ಮೀ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆಯಾಗಿಲ್ಲ ಯಾಕೆ ?

Views: 23
ತಡವಾಗಿ ನೋಂದಣಿಯಾದ ಮಹಿಳೆಯರಿಗೂ ದಾಖಲೆಗಳು ಸರಿಯಾಗಿದ್ದರೆ ಎರಡನೇ ಕಂತಿನ ಹಣ ಎರಡು ದಿನ ಅಥವಾ ವಾರದೊಳಗೆ ಜಮೆಯಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲನೇ ಕಂತಿನಲ್ಲಿ ಫಲಾನುಭವಿಗಳಿಗೆ ಪಾವತಿಯಾಗಿತ್ತು. ಅರ್ಜಿ ಸಲ್ಲಿಸುವ ಮಹಿಳೆಯರ ಸಂಖ್ಯೆ ಪೂರ್ಣಗೊಳ್ಳದ ಹಿನ್ನಲೆ ಇಲಾಖೆಯಲ್ಲೇ ಉಳಿದಿತ್ತು. ಇದೀಗ ಕೆಲವರ ಅರ್ಜಿ ಸೇರ್ಪಡೆಯಾಗಿದ್ದು, ಎರಡನೇ ಕಂತಿನಲ್ಲಿ ಹಣ ಬರುವ ನಿರೀಕ್ಷೆಯಿದೆ .
ಉಳಿದ ಮಹಿಳೆಯರ ಪಡಿತರ ಚೀಟಿಯಲ್ಲಿ ಹೆಸರು ವ್ಯತ್ಯಾಸ, ಆಧಾರ್ ಕಾರ್ಡ್‌ನಲ್ಲಿ ಹೆಸರಿನ ಗೊಂದಲ, ಇ-ಕೆವೈಸಿಯಾಗದಿರುವುದು ಸೇರಿ ನಾನಾ ಕಾರಣದಿಂದ ಅರ್ಜಿ ಸ್ವೀಕೃತವಾಗಿಲ್ಲ ಎರಡನೇ ತಿಂಗಳ ಮಾಸಿಕ 2ಸಾವಿರ ರೂ.ಅನುದಾನ ನೋಂದಣಿಯಾದ ಫಲಾನುಭವಿಗಳಿಗೆ ವಾರದೊಳಗೆ ಬಿಡುಗಡೆಯಾಗಲಿದೆ. ಫಲಾನುಭವಿಗಳ ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ದಿನದೊಳಗೆ ಆಯಾ ಮಹಿಳೆಯರ ಖಾತೆಗೆ ಜಮೆಯಾಗಲಿದೆ.
ಗೃಹಲಕ್ಷ್ಮೀ ಕಂತಿನ ಹಣ ಬಾರದಿರಲು ಇಲ್ಲಿವೆ ಪ್ರಮುಖ ಕಾರಣಗಳು!
ಕುಟುಂಬದ ಒಡತಿಗೆ ಮಾಸಿಕ ಎರಡು ಸಾವಿರ ರೂ. ಆರ್ಥಿಕ ಸಹಾಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ಉಳಿದ ನಾರಿಯರ ಪಡಿತರ ಚೀಟಿಯಲ್ಲಿ ಹೆಸರು ವ್ಯತ್ಯಾಸ, ಆಧಾರ್ ಕಾರ್ಡ್‌ನಲ್ಲಿ ಹೆಸರಿನ ಗೊಂದಲ, ಇ-ಕೆವೈಸಿಯಾಗದಿರುವುದು ಸೇರಿ ನಾನಾ ಕಾರಣದಿಂದ ಅರ್ಜಿ ಸ್ವೀಕೃತವಾಗಿಲ್ಲ. ಅರ್ಜಿ ಸ್ವೀಕೃತವಾದ ಮಹಿಳೆಯರ ಅರ್ಜಿ ಪರಿಶೀಲಿಸಿ, ಮೊದಲ ತಿಂಗಳ ಹಣ ಕಳೆದ ತಿಂಗಳು ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಎರಡನೇ ತಿಂಗಳ ಮಾಸಿಕ 2ಸಾವಿರ ರೂ.ಅನುದಾನ ನೋಂದಣಿಯಾದ ಫಲಾನುಭವಿಗಳಿಗೆ ವಾರದೊಳಗೆ ಬಿಡುಗಡೆಯಾಗಲಿದೆ. ಈ ಪೈಕಿ ಫಲಾನುಭವಿಗಳ ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ದಿನದೊಳಗೆ ಆಯಾ ಮಹಿಳೆಯರ ಖಾತೆಗೆ ಜಮೆಯಾಗಲಿದೆ.
ಆಹಾರ ಇಲಾಖೆ ಮಾಹಿತಿ ಪ್ರಕಾರ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬವೊಂದರ ಒಬ್ಬ ಮಹಿಳೆ ಮಾತ್ರ ಫಲಾನುಭವಿ ಆಗುವುದಕ್ಕೆ ಅವಕಾಶವಿದೆ.
ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಿಗೆ ಯೋಜನೆ ಅನ್ವಯಿಸುವುದಿಲ್ಲ. ಮಹಿಳೆಯ ಪತಿ ಆದಾಯ ತೆರಿಗೆ ಪಾವತಿದಾರನಾಗಿದ್ದರೂ ಮನೆಯೊಡತಿ ಯೋಜನೆ ಫಲಾನುಭವಿ ಆಗುವುದಕ್ಕೆ ಅವಕಾಶವಿಲ್ಲ. ಇದರಿಂದ ಹಲವರು ಪಡಿತರ ಚೀಟಿಯಿಂದ ಹೊರಹೋದ ಹಿನ್ನೆಲೆ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬಂದಿದ್ದಾರೆ.
ಇ- ಕೆವೈಸಿಯಿಂದ ನೋಂದಣಿ ವಿಳಂಬ ನೋಂದಣಿಯಾಗುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೆಲ ಮಹಿಳೆಯರ ಪಡಿತರ ಚೀಟಿ ಇ-ಕೆವೈಸಿ ಆಗದೇ ಇರುವುದರಿಂದ ನೋಂದಣಿಗೆ ತೊಂದರೆಯಾಗಿದೆ.
ಇನ್ನು ಹಲವು ಪ್ರಕರಣಗಳಲ್ಲಿ ಮಹಿಳೆಯರು ಜೀವಂತವಿದ್ದರೂ, ಪಡಿತರ ಚೀಟಿಯಲ್ಲಿ ಹೆಸರು ಕೈ ತಪ್ಪಿ ಹೋಗಿರುವ ಕಾರಣ ನೋಂದಣಿ ಸಾಧ್ಯವಾಗಿಲ್ಲ. ಕೆಲವರ ಹೆಸರು ಪಡಿತರ ಚೀಟಿಯಲ್ಲಿ ಹೆಸರಿದ್ದರೂ ಜೀವಂತವಿಲ್ಲ. ಇಂತಹ ಹಲವು ಕಾರಣದಿಂದ ಉಳಿದ ನೋಂದಣಿಗೆ ವಿಳಂಬವಾಗಿದೆ.
ಗೃಹಲಕ್ಷ್ಮೀ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಎರಡನೇ ತಿಂಗಳ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಅಧಿಕಾರಿಗಳು ತಿಳಿಸಿದ್ದಾರೆ.