ಇತರೆ

ಗಂಗೊಳ್ಳಿ ದೋಣಿ ದುರಂತ: ಸುರೇಶ್ ಖಾರ್ವಿ ಮೃತದೇಹ ಪತ್ತೆ

Views: 433

ಕನ್ನಡ ಕರಾವಳಿ ಸುದ್ದಿ: ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದ ಸಮುದ್ರದಲ್ಲಿ ಮಂಗಳವಾರ ದೋಣಿ ಮಗುಚಿ ಬಿದ್ದು, ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರು ಮೀನುಗಾರರ ಮೃತದೇಹ ಬುಧವಾರ ಪತ್ತೆಯಾಗಿದ್ದು, ಸುರೇಶ್ ಖಾರ್ವಿ ಮೃತದೇಹ ಗುರುವಾರ ಬೆಳಿಗ್ಗೆ 6 ಗಂಟೆಗೆ ಕೋಡಿ ಸೇವಾಕ್ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಗಂಗೊಳ್ಳಿ ಬಂದರಿನಿಂದ ಜು. 15ರಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮಗುಚಿದ್ದು, ನಾಲ್ವರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು. ಜಗದೀಶ್ ಖಾರ್ವಿ, ಲೋಹಿತ್ ಖಾರ್ವಿ ಮತ್ತು ಸಿಪಾಯಿ ಸುರೇಶ್ ಖಾರ್ವಿ ನಾಪತ್ತೆಯಾಗಿದ್ದರು.

ಇವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಸುರೇಶ್ ಖಾರ್ವಿ ಅವರ ಸುಳಿವು ಲಭ್ಯವಾಗಿಲ್ಲದ ಕಾರಣ ಶೋಧ ಕಾರ್ಯ ಮುಂದುವರಿಸಿ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

Related Articles

Back to top button