ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿಯ ಅವಧಿ ವಿಸ್ತರಣೆ ಮಾಡಲು ಹೈಕೋರ್ಟ್ ನಿರಾಕರಣೆ

Views: 92
ಉಡುಪಿ: ಜಿಲ್ಲೆಯ ಪ್ರಸಿದ್ಧ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿಯ ಅವಧಿ ವಿಸ್ತರಣೆ ಮಾಡಲು ಹೈಕೋರ್ಟ್ ನಿರಾಕರಿಸಿದೆ. ಕೊಲ್ಲೂರು ಮೂಕಾಂಬಿಕ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಸಂಪೂರ್ಣ ಅಧಿಕಾರವಧಿ ಅನುಭವಿಸಿದ್ದಾರೆ. ಆದರೂ ಕೊನೆಯ ಘಳಿಗೆಯಲ್ಲಿ ಸಮಿತಿ ಅವಧಿ ವಿಸ್ತರಿಸಲು ಕೆರಾಡಿ ಚಂದ್ರಶೇಖರ ಶೆಟ್ಟಿ ಸೇರಿ 6 ಮಂದಿ ಮನವಿ ಮಾಡಿಕೊಂಡಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಧೀಶರಾದ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಆದೇಶ ಹೊರಡಿಸಿದ್ದು, ಅವಧಿ ವಿಸ್ತರಣೆ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಹೈಕೋರ್ಟ್ ಪರಿಗಣಿಸಿರುವ ಅಂಶಗಳು: ಸಮಿತಿ ರಚನೆ ವೇಳೆ 3 ವರ್ಷ ಅವಧಿಗೆ ಸದಸ್ಯರು ಒಪ್ಪಿದ್ದರು. ಅದರಂತೆ ಎಲ್ಲರೂ ಅಧಿಕಾರವನ್ನು ಅನುಭವಿಸಿದ್ದಾರೆ. ಸದ್ಯ ಅವಧಿ ಕೊನೆಯಲ್ಲಿ ಅವಧಿ ವಿಸ್ತರಿಸಲು ಅರ್ಜಿ ಸಲ್ಲಿಸಲಾಗಿದೆ. ಇದನ್ನು ನ್ಯಾಯಾಲಯ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ. ಇದು ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆಗೆ ವಿರುದ್ಧ ವಾಗಲಿದೆ. ಕಾಯ್ದೆ ಪ್ರಕಾರ ಸಮಿತಿ ಮೊದಲ ಸಭೆಯಿಂದ 3 ವರ್ಷ ಅವಧಿ ಇರಲಿದೆ. 3 ವರ್ಷದ ಬಳಿಕ ಸಮಿತಿ ಅಧಿಕಾರ ಕಳೆದುಕೊಳ್ಳಲಿದೆ. ಈ ಬಗ್ಗೆ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಸಮಿತಿ ಅಧ್ಯಕ್ಷರ ಆಯ್ಕೆ ದಿನದಿಂದ ಎಂದು ಹೇಳಿಲ್ಲ. ಸಮಿತಿ ರಚನೆ ದಿನದಿಂದ ಅವರೆಲ್ಲಾ ಸದಸ್ಯರು. ಅಧ್ಯಕ್ಷರ ಆಯ್ಕೆಯಾದ ದಿನದಿಂದ ಅಲ್ಲ. ಇದು ಕಾನೂನಿಗೆ ವಿರುದ್ಧವಾದ ಆಗಲಿದೆ.
ಏನಿದು ಪ್ರಕರಣದ ಹಿನ್ನೆಲೆ: 2020 ಅ.27 ರಂದು ಆಡಳಿತ ಮಂಡಳಿ ಸಮಿತಿ ರಚನೆಯಾಗಿದೆ. ಧಾರ್ಮಿಕ ದತ್ತಿ ಕಾಯ್ದೆ ಸೆ. 25 ರಡಿ ರಚನೆ ಮಾಡಲಾಗಿದೆ. ಅಲ್ಲಿಂದ 3 ವರ್ಷಗಳ ಅವಧಿಗಾಗಿ ಸಮಿತಿ ರಚಿಸಲು ಆದೇಶಿಸಲಾಗಿತ್ತು. ಅರ್ಜಿದಾರರು ಅಂದಿನಿಂದ 3 ವರ್ಷ ಅಧಿಕಾರ ಚಲಾವಣೆ ಮಾಡಿದ್ದಾರೆ. ಸಮಿತಿ ಮೊದಲ ಸಭೆಯಿಂದ ಕಾಲಾವಧಿ ಆರಂಭ. ಅದರಂತೆ 2024 ರ ಏ.26 ಕ್ಕೆ ಮುಕ್ತಾಯ ಆಗಲಿದೆ. ಆದರೆ 6 ಸದಸ್ಯರು 3 ವರ್ಷದ ಅವಧಿಯ ಆದೇಶ ರದ್ದಿಗೆ ಮನವಿ ಮಾಡಲಾಗಿದೆ. ಈ ಕುರಿತಂತೆ ಪ್ರತಿವಾದಿ ವಿಸ್ತರಿಸಲು ಮಾರ್ಪಾಡು ಕೇಳಿದ್ದರು. ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಅತುಲ್ ಕುಮಾರ್ ಶೆಟ್ಟಿ, ರತ್ನಾ, ಎಚ್.ಜಯನಂದ, ಕೆ.ರಾಮಚಂದ್ರ ಅಡಿಗಾ, ಗೋಪಾಲಕೃಷ್ಣ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್ ಐಎ ಹಾಕಿದ್ದರು. ಈ ಅರ್ಜಿಯನ್ನು ಪರಿಶೀಲಿಸಿ ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.