ಇತರೆ
ಕುಂದಾಪುರ ಹೇರಿ ಕುದ್ರು ಸೇತುವೆ ಬಳಿ ಡಿವೈಡರಿಗೆ ಸ್ಕೂಟಿ ಡಿಕ್ಕಿ ಸವಾರ ಸಾವು

Views: 100
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ತಲ್ಲೂರಿನ ಹೇರಿ ಕುದ್ರು ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟಿ ಡಿವೈಡರಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಪಟ್ಟ ವ್ಯಕ್ತಿ ಬೈಂದೂರು ಸಮೀಪದ ಹಾಗೂ ಪ್ರಸ್ತುತ ಕುಂದಾಪುರ ನಿವಾಸಿಯಾಗಿದ್ದು, ಮೊಹಮ್ಮದ್ ಫವೇಝ್( 37) ಮೃತಪಟ್ಟವರು.
ಮುಂಜಾನೆ ಹೆಮ್ಮಾಡಿಯಿಂದ ಕುಂದಾಪುರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಉತ್ತಮ ಕ್ರೀಡಪಟುವಾಗಿದ್ದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.