ಇತರೆ
ಕುಂದಾಪುರ: ಸಳ್ವಾಡಿಯಲ್ಲಿ ತೆಂಗಿನ ಮರ ಹತ್ತುವಾಗ ಕೈಕಾಲು ಜಾರಿ ಬಾವಿಗೆ ಬಿದ್ದು ಸಾವು

Views: 294
ಕನ್ನಡ ಕರಾವಳಿ ಸುದ್ದಿ:ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಸಳ್ವಾಡಿಯಲ್ಲಿ ತೆಂಗಿನ ಮರ ಹತ್ತುವಾಗ ಆಕಸ್ಮಿಕವಾಗಿ ಕೈ ಕಾಲು ಜಾರಿ ಬಾವಿಗೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜ.24ರಂದು ಬೆಳಿಗ್ಗೆ ನಡೆದಿದೆ. ಶೀನ (54) ಮೃತಪಟ್ಟ ವ್ಯಕ್ತಿ
ಶೀನ ಅವರು ಶುಕ್ರವಾರ ಬೆಳಿಗ್ಗೆ ಸಳ್ವಾಡಿಯ ಉದಯ ಅವರ ಮನೆಯ ತೋಟದ ಕೆಲಸಕ್ಕೆಂದು ಸಂಬಂಧಿ ರಾಜು, ಗೋಪಾಲ ಹಾಗೂ ಸುರೇಶ ಅವರೊಂದಿಗೆ ತೆರಳಿದ್ದರು. ತೆಂಗಿನ ಕಾಯಿ ಕೊಯ್ಯಲು ಮರ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕೈಕಾಲು ಜಾರಿ ಅಲ್ಲಿಯೇ ಇದ್ದ ಬಾವಿಗೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೂಡಲೇ ಅಗ್ನಿಶಾಮಕ ದಳದವರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.ಸಂಬಂಧಿ ಚಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.