ಇತರೆ

ಕುಂದಾಪುರ: ಪ್ರವಾಸಿಗರು ಪ್ರಯಾಣಿಸುತ್ತಿದ್ದ ಟೆಂಪೋ ಚಾಲಕ ಹಠಾತ್ ಬ್ರೇಕ್:ಮಹಿಳೆ ಬಿದ್ದು ಗಂಭೀರ 

Views: 113

ಕನ್ನಡ ಕರಾವಳಿ ಸುದ್ದಿ: ಪ್ರವಾಸಿಗರು ಪ್ರಯಾಣಿಸುತ್ತಿದ್ದ ಟೆಂಪೋ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಮಹಿಳೆಯೊಬ್ಬರು ವಾಹನದೊಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ದಾವಣಗೆರೆಯ ನಾಗರತ್ನಾ (52) ಅವರು ಸ್ನೇಹಿತೆಯರೊಂದಿಗೆ ದಾವಣಗೆರೆಯಿಂದ ಕಮಲಶಿಲೆಗೆ ಟೆಂಪೊ ಟ್ರಾವೆಲರ್ ಮೂಲಕ ಬಂದು ಮರಳಿ ಹೋಗುವಾಗ ಮರವಂತೆ ಬೀಚ್ ಬಳಿ ಚಾಲಕ  ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ನಾಗರತ್ನಾ ವಾಹನದ ಒಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button