ಯುವಜನ

ಕುಂದಾಪುರ: ಡಿ.5ಕ್ಕೆ ನಿಗದಿಯಾಗಿದ್ದ ಮದುವೆಗೆ ಮುನ್ನವೇ ವರ ನಾಪತ್ತೆ 

Views: 412

ಕುಂದಾಪುರ: ಮದುವೆ ನಿಗದಿಯಾಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೇಶ್ವರ ಗ್ರಾಮದ ಜಯಲಕ್ಷ್ಮೀ ಎಂಬವರು ಕಾರ್ತಿಕ್(28) ಎಂಬವರನ್ನು ಮದುವೆ ಮಾತುಕತೆ ಮಾಡಿಕೊಂಡು ಡಿ.5ರಂದು ಮದುವೆ ಆಗುವುದಾಗಿ ನಿಶ್ಚಯಿಸಿದ್ದರು.

ಅದರಂತೆ ಜು.16ರಂದು ಮದುವೆ ನೊಂದಣಿ ಮಾಡಿಕೊಂಡಿದ್ದರು. ನ.27ರಂದು ಅಪರಾಹ್ನ ವೇಳೆ ಕಾರ್ತಿಕ್, ಜಯಲಕ್ಷ್ಮೀಗೆ ಕರೆ ಮಾಡಿ, ತಾನು ಕೋಟೇಶ್ವರದಲ್ಲಿದ್ದು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೋಗಿದ್ದರು.ನಂತರ ಅವರು ವಾಪಾಸು ಬಾರದೇ ಮೊಬೈಲ್ ಸ್ವಿಚ್‌ಆಫ್ ಮಾಡಿ ಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ.

5.6 ಅಡಿ ಎತ್ತರ, ಗೋದಿ ಮೈಬಣ್ಣ, ಎಡಗೈ ಮೇಲೆ ಮಾರ್ಕ್, ಬಲಕಿವಿಯಲ್ಲಿ ಚಿನ್ನದ ರಿಂಗ್ ಇರುತ್ತದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button