ಕರಾವಳಿ
ಕುಂದಾಪುರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರ ಹತ್ಯೆಗೆ ಯತ್ನ..!

Views: 193
ಕುಂದಾಪುರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಹರೀಶ್ ಅವರು ಠಾಣಾ ಕರ್ತವ್ಯದಲ್ಲಿ ದಲ್ಲಿರುವಾಗ ಇಲಾಹಿದ್ ಎಂಬಾತನು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ
ಕೋಟೇಶ್ವರದ ಸಮೀಪ ಕೋಸ್ಟಲ್ ಕ್ರೌನ್ ಕಟ್ಟಡದ ಹಿಂಬದಿಯಲ್ಲಿ ಆರೋಪಿ ಇರುವ ಮಾಹಿತಿ ತಿಳಿದು ಸಿಬ್ಬಂದಿ ಜೊತೆ ಹೋದಾಗ ಹಿಲಾಹಿದ್ ಅಲ್ಲಿ ನಿಂತುಕೊಂಡಿದ್ದು ಠಾಣೆಗೆ ಬರುವಂತೆ ತಿಳಿಸಿದಾಗ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಎಎಸ್ಐ ಮೇಲೆ ಎಸೆದು ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ವರ್ತಿಸಿ ಹತ್ಯೆಗೆ ಯತ್ನ ಮಾಡಿದ್ದ
ಕೂಡಲೇ ಎಎಸ್ಐ ಸಂಭಾವ್ಯ ಅಪಾಯದಿಂದ ಹಿಂದೆ ಸರಿದಿದ್ದಾರೆ. ಆರೋಪಿಯನ್ನು ಹಿಡಿಯಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ನಂತರ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.