ಸಾಮಾಜಿಕ

ಕುಂದಾಪುರ: ಕೌಟುಂಬಿಕ ವೈಮನಸ್ಸು ಕುಂಭಾಸಿಯಲ್ಲಿ ವ್ಯಕ್ತಿ ಆತ್ಮಹತ್ಯೆ

Views: 191

ಕನ್ನಡ ಕರಾವಳಿ ಸುದ್ದಿ : ಕುಂಭಾಸಿ ಗಣೇಶನಗರ ನಿವಾಸಿ ಮೋಹನ ಸುಬ್ಬ (70) ಅವರು ಕೌಟುಂಬಿಕ ವಿಚಾರದಲ್ಲಿ ಉಂಟಾದ ವೈಮನಸ್ಸಿನ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜ. 30ರ ರಾತ್ರಿಯಿಂದ ಜ. 31ರ ಬೆಳಗ್ಗೆ 6.30ರ ನಡುವೆ ಸಂಭವಿಸಿದ ಈ ಘಟನೆಯಲ್ಲಿ ಮೋಹನ ಸುಬ್ಬ ಹಾಗೂ ಅವರ ಪತ್ನಿ ಆಗಾಗ್ಗೆ ಕೌಟುಂಬಿಕ ವಿಚಾರದಲ್ಲಿ ಸಣ್ಣಪುಟ್ಟ ಜಗಳ ಮಾಡಿಕೊಂಡು ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗಿದೆ.

ಪುತ್ರಿ ಸುಪ್ರಿಯಾ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button