ಸಾಂಸ್ಕೃತಿಕ

ಕುಂದಾಪುರ: ಕೃಷ್ಣ ಸುಂದರಿ ಭೂಮಿ ಶೆಟ್ಟಿ ಬೋಲ್ಡ್ ಆಗಿರೋ ಫೋಟೋ ಸಿಕ್ಕಾಪಟ್ಟೆ ವೈರಲ್… 

Views: 314

ಕನ್ನಡ ಕರಾವಳಿ ಸುದ್ದಿ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬೋಲ್ಡ್ ಆಗಿರೋ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಮತ್ತೊಂದು ಪ್ರತಿಭೆ ಅನಾವರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ಭೂಮಿ ಶೆಟ್ಟಿ ಯಕ್ಷಗಾನದಲ್ಲೂ ಪಾತ್ರ ಮಾಡುವ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಸೀತೆಯ ಪಾತ್ರದಲ್ಲಿ ಯಕ್ಷಗಾನದಲ್ಲಿ ಭೂಮಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದೆಯೂ ಹೌದು. ಬಿಗ್ಬಾಸ್ ಹಾಗೂ ಕಿನ್ನರಿ ಧಾರಾವಾಹಿ ಮೂಲಕ ಕರ್ನಾಟಕ ಜನತೆಗೆ ಪರಿಚಿತರಾದ ಭೂಮಿ ಶೆಟ್ಟಿ, ಯಕ್ಷಗಾನದಲ್ಲಿಯೂ ಪಾತ್ರ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಮಾಡಿದ ಪಾತ್ರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಲವ-ಕುಶ ಪ್ರಸಂಗದಲ್ಲಿ ಸೀತೆಯ ಪಾತ್ರವನ್ನು ಭೂಮಿ ಶೆಟ್ಟಿ ಮಾಡಿದ್ದಾರೆ. ಜೊತೆಗೆ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಯಾವ ರೀತಿ ಯಕ್ಷಗಾನದ ತಯಾರಿ ಮಾಡಿಕೊಂಡರು? ಹೇಗೆ ತಮ್ಮ ಪಾತ್ರದ ಬಗ್ಗೆ ಅರಿತುಕೊಂಡರು? ಎಂಬೆಲ್ಲ ವಿಷಯವನ್ನು ಹಂಚಿಕೊಂಡಿದ್ದಾರೆ.

ಸದ್ಯ ಭೂಮಿ ಶೆಟ್ಟಿ ಶೇರ್ ಮಾಡಿಕೊಂಡ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಎಲ್ಲದಕ್ಕೂ ಸೈ ನಮ್ಮ ಕೃಷ್ಣ ಸುಂದರಿ ಅಂತ ಕಾಮೆಂಟ್ಸ್ ಹಾಕಿ ಹಾಡಿ ಹೊಗಳುತ್ತಿದ್ದಾರೆ. ಹಗಲು ಸಾಮಾನ್ಯ ಜನರಂತೆ ಬದುಕಿ ರಾತ್ರಿ ಯಕ್ಷರಾಗಿ ಯಕ್ಷಲೋಕದಲ್ಲಿ ಸಂಚರಿಸುವವರು ನಮ್ಮ ಯಕ್ಷಗಾನ ಕಲಾವಿದರಿಗೆ ನನ್ನ ದೊಡ್ಡ ನಮಸ್ಕಾರಗಳು ಯಕ್ಷಗಾನಂ ಗೆಲ್ಗೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.

Related Articles

Back to top button