ಕುಂದಾಪುರ: ಕಾರಾವರ ಲೈಟ್‌ಹೌಸ್ ಬಳಿ ಗಂಗೊಳ್ಳಿಯ ಬೋಟ್ ಮುಳುಗಡೆ,8 ಮೀನುಗಾರರ ರಕ್ಷಣೆ

Views: 99
ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಬಳಿ ಕುಂದಾಪುರ ಗಂಗೊಳ್ಳಿಯ ಮೊಮಿನ್ ನಾಜಿಮಾ ಅವರಿಗೆ ಸೇರಿದ ಸೀ ಹಂಟರ್ ಹೆಸರಿನ ಮೀನುಗಾರಿಕೆ ಬೋಟ್ ಮುಳುಗಡೆಯಾಗಿದೆ.8 ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಎಂದಿನಂತೆ ಮೀನು ಹಿಡಿಯಲು ತೆರಳಿದ್ದ ಈ ಬೋಟ್ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಬಳಿ ಅಪಘಾತಕ್ಕೀಡಾಗಿದೆ. ಮಕರ ಸಂಕ್ರಾಂತಿ ಹಬ್ಬವನ್ನೂ ಆಚರಣೆ ಮಾಡದೇ ಮುಂಜಾನೆ ಮಹಾರಾಷ್ಟ್ರದತ್ತ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ನಲ್ಲಿ 8 ಮಂದಿ ಮೀನುಗಾರರು ಇದ್ದರು ಎಂದು ತಿಳಿದುಬಂದಿದೆ.
ಕಬ್ಬಿಣದ ಬೋಟ್ ಆಗಿದ್ದರಿಂದ ಬೋಟ್‌ನ ತಳಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿತ್ತು. ಇದರಿಂದ ಬೊಟ್‌ನ ಇಂಜಿನ್ ಒಳಗೆ ವೇಗವಾಗಿ ನೀರು ನುಗ್ಗಿದೆ. ಇನ್ನು ಬೋಟ್‌ನಲ್ಲಿ ನೀರು ನುಗ್ಗುವುದು, ಅದನ್ನು ತಡೆಯಲು ಮೀನುಗಾರರು ಪಟ್ಟ ಶ್ರಮವನ್ನು ಸ್ವತಃ ಮೀನುಗಾರರೇ ವಿಡಿಯೋ ಮಾಡಿಕೊಂಡಿದ್ದಾರೆ.
ಕೂಡಲೇ ಸ್ಥಳೀಯ ಮೀನುಗಾರರಿಂದ ಮುಳುಗಡೆ ಆಗುತ್ತಿದ್ದ ಬೋಟಿನ ಒಳಗಿದ್ದ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. . ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.