ಯುವಜನ

ಕುಂದಾಪುರ: ಉಪ್ಪಿನ ಕುದ್ರುವಿನಲ್ಲಿ ನಾಪತ್ತೆಯಾಗಿದ್ದ ಯುವಕ- ಯುವತಿ ಮದುವೆಯಾಗಿ ಪ್ರತ್ಯಕ್ಷ!

Views: 1486

ಕನ್ನಡ ಕರಾವಳಿ ಸುದ್ದಿ: ಉಪ್ಪಿನ ಕುದ್ರುವಿನ ಬಾಬು ಪೂಜಾರಿ ಅವರ ಪುತ್ರ ಸುಹಾಸ್ (23) ಕಾಲೇಜಿಗೆ ಹೋಗಿ ಟಿಸಿ ತರುತ್ತೇನೆ ಎಂದು ಹಾಗೂ ಉಪ್ಪಿನ ಕುದ್ರುವಿನ  ಭಾಸ್ಕರ ಆಚಾರ್ಯ ಅವರ ಪುತ್ರಿ ಪಲ್ಲವಿ (18) ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಅವರಿಬ್ಬರು ಮನೆಯಿಂದ ಜು.13 ರಂದು ನಾಪತ್ತೆಯಾಗಿದ್ದು ಇದೀಗ ಮದುವೆಯಾಗಿ ಕುಂದಾಪುರ ಪೊಲೀಸ್ ಠಾಣೆಗೆ ಬಂದು ಪ್ರತ್ಯಕ್ಷರಾಗಿದ್ದಾರೆ.

ಈ ವೇಳೆ ಅವರಿಬ್ಬರೂ ಕೂಡ ತಂದೆ- ತಾಯಿಯೊಂದಿಗೆ ಹೋಗಲು ಒಪ್ಪದೆ ನಾವು ಪ್ರತ್ಯೇಕವಾಗಿ ಇರುವುದಾಗಿ ಹೇಳಿಕೆಯನ್ನು ಪೊಲೀಸರಿಗೆ ಬರೆದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!