ಟೆಂಟ್ ಹೌಸ್‌ನಲ್ಲಿ ಶುರುವಾದ ಪ್ರೀತಿ :ಕೆಲಸ ಮಾಡುತ್ತಿದ್ದ ಯುವಕನನ್ನೇ ವರಿಸಿದ ಮಾಲಕನ ಪುತ್ರಿ,!
Views: 143
ಕನ್ನಡ ಕರಾವಳಿ ಸುದ್ದಿ: ಗುಡ್ಡು ಎಂಬ ಯುವಕ ಸ್ಥಳೀಯ ಟೆಂಟ್ ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಯಕ್ರಮಗಳಿಗೆ ಬೇಕಾದ ಟೆಂಟ್ ಸಾಮಗ್ರಿಗಳನ್ನು ತರಲು ಮತ್ತು ಜೋಡಿಸಲು ಆತ ಆಗಾಗ್ಗೆ ಟೆಂಟ್ ಮಾಲೀಕರ ಮನೆಗೆ ಹೋಗಿ ಬರುತ್ತಿದ್ದ. ಹೀಗೆ ಪದೇ ಪದೇ ಮನೆಗೆ ಬರುತ್ತಿದ್ದ ಗುಡ್ಡು ಹಾಗೂ ಮಾಲೀಕನ ಮಗಳು ಕರೀನಾ ನಡುವೆ ಪರಿಚಯ ಬೆಳೆದಿದೆ. ದಿನ ಕಳೆದಂತೆ ಆ ಪರಿಚಯ ಗಾಢವಾದ ಪ್ರೀತಿಗೆ ತಿರುಗಿದೆ.
ಕರೀನಾ ಗುಡುವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಆದರೆ ಗುಡ್ಡುವಿನ ಬಣ್ಣ, ರೂಪ ಮತ್ತು ಬಡತನದ ಹಿನ್ನೆಲೆಯಿಂದಾಗಿ ಆತನೊಂದಿಗೆ ಮದುವೆ ಮಾಡಲು ತನ್ನ ತಂದೆ ಎಂದಿಗೂ ಒಪ್ಪುವುದಿಲ್ಲ ಎಂಬುದು ಆಕೆಗೆ ಸ್ಪಷ್ಟವಾಗಿ ತಿಳಿದಿತ್ತು. ಹೀಗಾಗಿ ಆಕೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಳು. “ನೀನು ಊರಿಗೆಲ್ಲ ಮದುವೆಗೆ ಟೆಂಟ್ ಹಾಕಿದ್ದೀಯಾ, ಆದ್ರೆ ನಮ್ಮ ಮದುವೆಗೆ ಟೆಂಟ್ ಇಲ್ಲದೆಯೇ ನಡೆಯುತ್ತೆ” ಎಂದು ಗುಡುವಿಗೆ ಧೈರ್ಯ ತುಂಬಿದ ಕರೀನಾ, ತಾನೇ ಆತನನ್ನು ಊರಿನಿಂದ ಕರೆದುಕೊಂಡು ಹೋಗಿ ಮದುವೆಯಾಗಿದ್ದಾಳೆ.
ಮದುವೆಯಾದ ಬೆನ್ನಲ್ಲೇ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಕರೀನಾ, “ನನ್ನ ಸ್ವಂತ ಇಷ್ಟದ ಮೇರೆಗೆ ನಾನೇ ಈತನನ್ನು ಕರೆದುಕೊಂಡು ಬಂದು ಮದುವೆಯಾಗಿದ್ದೇನೆ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾಳೆ.






