ಇತರೆ
ಕುಂದಾಪುರ:ಮುಳ್ಳಿಕಟ್ಟೆಯಲ್ಲಿ ಅಪಘಾತ: ರಿಕ್ಷಾ ಚಾಲಕ ಸಾವು

Views: 320
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆಯಲ್ಲಿ ರಿಕ್ಷಾ – ಕಾರು ಢಿಕ್ಕಿಯಾಗಿ ರಿಕ್ಷಾ ಪಲ್ಟಿಯಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ರಿಕ್ಷಾ ಚಾಲಕ ಗೋಪಾಲ ಅವರ ತಲೆ, ಮುಖ, ಎದೆ ಹಾಗೂ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ ಯ.
ಮುಳ್ಳಿಕಟ್ಟೆಯಲ್ಲಿ ಗುರುವಾರ ಅಪಘಾತ ನಡೆದಿದ್ದು ರಿಕ್ಷಾ ಚಾಲಕ ಗೋಪಾಲ ಹಾಗೂ ಕಾರಿನಲ್ಲಿದ್ದ ಚಂದ್ರ ಎಂಬ ಇಬ್ಬರು ಗಾಯಗೊಂಡಿದ್ದರು. ಗೋಪಾಲ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.