ಶಿಕ್ಷಣ

ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಇಂಡಸ್ಟ್ರಿಯಲ್ ವಿಸಿಟ್’

Views: 531

ಕುಂದಾಪುರದ ಆರ್.ಎನ್.ಶೆಟ್ಟಿ‌ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಉತ್ಪನ್ನ ಘಟಕದ ಬಗ್ಗೆ ಮಾಹಿತಿ- ಪ್ರಾತ್ಯಕ್ಷಿಕೆ ನೀಡುವ ಸಲುವಾಗಿ ‘ ಇಂಡಸ್ಟ್ರಿಯಲ್ ವಿಸಿಟ್’ ನ್ನು ಹಮ್ಮಿಕೊಳ್ಳಲಾಯಿತು. ಈ‌ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಉಪ್ಪೂರಿನ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಫ್ಯಾಕ್ಟರಿ ಮತ್ತು ಶಿರಿಯಾರದ ತಂಪು ಪಾನೀಯ ಉತ್ಪಾದನಾ ಘಟಕ ‘ ಶ್ರೀ ಕಟೀಲೇಶ್ವರಿ ಬಾಟ್ಲಿಂಗ್ ಕಂಪೆನಿ’ ಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಕೋಟಾದ ಕಾರಂತ ಥೀಮ್ ಪಾರ್ಕ್ ಗೂ ಭೇಟಿ ನೀಡಲಾಯಿತು.

ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ, ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ, ಹಿಂದಿ ಉಪನ್ಯಾಸಕಿ ಜಯಶೀಲಾ ಪೈ ಹಾಗೂ ಇತರ ಉಪನ್ಯಾಸಕರು ವಿದ್ಯಾರ್ಥಿಗಳ ಜತೆಗೂಡಿದ್ದರು.

Related Articles

Back to top button