ಇತರೆ

ಕುಂದಾಪುರದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಿದೆ… CET/NEET/JEE/CA/CS ಪರೀಕ್ಷೆಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಸುಜ್ಞಾನ ಪಿಯು ಕಾಲೇಜು

Views: 105

ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷಕ್ಕೂ ಅಧಿಕ ಅನುಭವವುಳ್ಳ ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಗಳಿಸಿರುವ ಡಾ| ರಮೇಶ ಶೆಟ್ಟಿ ಯವರ ಅಧ್ಯಕ್ಷತೆಯ, CA/CS ತರಬೇತಿಗೆ ಹೆಸರಾದ ಶಿಕ್ಷಪ್ರಭಾ ಸಂಸ್ಥೆಯ ಸ್ಥಾಪಕರುಗಳಾದ ಪ್ರತಾಪಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಕಾರ್ಯದರ್ಶಿ ಮತ್ತು ಖಜಾಂಚಿಗಳಾದ ಸುಜ್ಷಾನ ಎಜುಕೇಶನ್ ಟ್ರಸ್ಟ್ ಕುಂದಾಪುರದ ಯಡಾಡಿ-ಮತ್ಯಾಡಿಯಲ್ಲಿ ತನ್ನ ಸ್ವಂತ ಜಾಗದಲ್ಲಿ ಸುಜ್ಞಾನ ಪಿ.ಯು ಕಾಲೇಜು ಎನ್ನುವ ಸಂಸ್ಥೆಯನ್ನು ಆರಂಭಿಸಿ ಈಗಾಗಲೇ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ 2024-25 ರಿಂದಲೇ CET/NEET/JEE ತರಬೇತಿಯನ್ನು ನೀಡುತ್ತಾ ವಾಣಿಜ್ಯ ವಿದ್ಯಾರ್ಥಿಗಳಿಗೆ CA/CS ತರಬೇತಿಯನ್ನು ನೀಡಿ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳನ್ನು ಸನ್ನದ್ದುಗೊಳಿಸುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಆದ್ಯತೆ

video
play-sharp-fill

ಸುಜ್ಞಾನ ಎಜುಕೇಶನಲ್ ಟ್ರಸ್ಟ್ 2021 ರಿಂದಲೇ ಕುಂದಾಪುರದಲ್ಲಿ CET/NEET/JEE ಪರೀಕ್ಷೆ ಮತ್ತು CA/CS ಪರೀಕ್ಷೆಗೆ ಗುಣಮಟ್ಟದ ತರಬೇತಿಯನ್ನು ನೀಡಿ ಆತ್ಯಧಿಕ ರ‍್ಯಾಂಕ್‌ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯಲ್ಲಿ ದೇಶದ ನಾನಾ ಭಾಗದ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ JEE/ NEET ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ ಅನುಭವವುಳ್ಳ ಬೋಧಕ ಸಿಬ್ಬಂದಿಗಳ ತಂಡ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲು ಸಿದ್ದವಾಗಿದೆ.

ಹಾಸ್ಟೆಲ್ ಸೌಲಭ್ಯ 

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನಲ್ಲಿ 3ನೇ ತರಗತಿಯಿಂದ 12 ನೇ ತರಗತಿಯ ತನಕ ಹಾಸ್ಟೆಲ್ ಸೌಲಭ್ಯದ ಅವಕಾಶವಿದ್ದು ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಆಧುನಿಕ ಸೌಲಭ್ಯವುಳ್ಳ ಹಾಸ್ಟೆಲ್ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ನಲ್ಲಿ Residential Teachers ಕೂಡ ಇರುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ವಿಷಯವಾರು ಸಂಶಯ ನಿವಾರಣೆಗೆ ಅನುಕೂಲವಾಗುತ್ತದೆ.

ಉಚಿತ ಶಿಕ್ಷಣದ ಅವಕಾಶ 

SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶವಿದ್ದು CET/NEET/JEE ತರಬೇತಿಯನ್ನು ಕೂಡ ಉಚಿತವಾಗಿ ನೀಡಲಾಗುವುದು, ಆಯ್ದ 40 ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಆಸಕ್ತರು ಸಂಸ್ಥೆಯ ದೂರವಾಣಿ ಸಂಖ್ಯೆ 9964291755 / 8217527362 / 9845925983ಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ನೂತನ ವಿದ್ಯಾಸಂಸ್ಥೆ

ನಿರೀಕ್ಷೆಗೆ ತಕ್ಕಂತೆ ಜ್ಞಾನಾರ್ಜನೆಗೈಯ್ಯಲು ಹೊಸ ಪಿಯು ಕಾಲೇಜು ಆರಂಭ

ಡಾ. ರಮೇಶ್ ಶೆಟ್ಟಿ ನೇತೃತ್ವದ ತಂಡದಿಂದ ಲೋಕಾರ್ಪಣೆಗೊಂಡಿದೆ ಸುಜ್ಞಾನ ಪಿಯು ಕಾಲೇಜು

ಕೋಟೇಶ್ವರದ ಈ ಹೊಸ ಕಾಲೇಜಿನಲ್ಲಿ ದಾಖಲಾತಿ ಆರಂಭ.

Related Articles

Back to top button