ಇತರೆ

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿಯ ಆರೋಪಿ ಕಾರ್ಕಳದಲ್ಲಿ ಬಂಧನ

Views: 77

ಕನ್ನಡ ಕರಾವಳಿ ಸುದ್ದಿ: ವಿದೇಶಿಯರ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 12 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ನಿವಾಸಿ ತಾಜ್ ಮೊಹಮ್ಮದ್ ಯುಸೂಫ್ (59) ಬಂಧಿತ ಆರೋಪಿ.

ಈತನ ವಿರುದ್ಧ 2014ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವಿದೇಶಿಯರ ಕಾಯ್ದೆ ಕಲಂ 14(a) (b), 14(c) ಹಾಗೂ ಐಪಿಸಿ ಸೆಕ್ಷನ್ 34ರ ಅಡಿಯಲ್ಲಿ ಪ್ರಕರಣ (ಕ್ರೈಂ ನಂಬರ್: 152/2014) ದಾಖಲಾಗಿತ್ತು. ಪ್ರಕರಣ ದಾಖಲಾದಾಗಿನಿಂದಲೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಪೊಲೀಸರ ಕಾರ್ಯಾಚರಣೆ: ಬಂಟ್ವಾಳ ಸಹಾಯಕ ಪೊಲೀಸ್‌ ಅಧೀಕ್ಷಕ (ASP) ಯಶ್ ಕುಮಾರ್ ಶರ್ಮಾ (ಐಪಿಎಸ್) ಅವರ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಪೊಲೀಸ್‌ ಉಪನಿರೀಕ್ಷಕರುಗಳಾದ (PSI) ಮಂಜುನಾಥ ಟಿ. ಮತ್ತು ಕೃಷ್ಣಕಾಂತ ಕೆ. ಅವರ ಮಾರ್ಗದರ್ಶನದಲ್ಲಿ. ಪೊಲೀಸ್‌ ಕಾನ್‌ಸ್ಟೇಬಲ್‌ಗಳಾದ ಶಿವಾನಂದ ಮಡ್ಡಿ. ಸಿದ್ದಪ್ಪ ಮತ್ತು ಪ್ರವೀಣ್‌ ಅವರನ್ನೊಳಗೊಂಡ ವಿಶೇಷ ತಂಡವು ಖಚಿತ ಮಾಹಿತಿ ಮೇರೆಗೆ ಕಾರ್ಕಳದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಲಾಗಿದೆ.

ಬಂಧಿತ ಆರೋಪಿ ತಾಜ್ ಮೊಹಮ್ಮದ್ ಯುಸೂಫ್‌ನನ್ನು ಫೆಬ್ರವರಿ 24ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related Articles

Back to top button
error: Content is protected !!