ಕಿಚ್ಚ ಸುದೀಪ್ ಬಿಗ್‌ಬಾಸ್‌ಗೆ ಗುಡ್‌ಬೈ.. ಮುಂದಿನ ಆವೃತ್ತಿಗೆ ಸ್ಟಾರ್ ನಟ ಯಾರು?

Views: 146
ಕನ್ನಡ ಕರಾವಳಿ ಸುದ್ಧಿ: ಬರೋಬ್ಬರಿ 10 ವರ್ಷಗಳ ಕಾಲ ಸುದೀಪ್ ಬಿಗ್‌ಬಾಸ್ ನಡೆಸಿ ಕೊಟ್ಟಿದ್ದಾರೆ. ಸುದೀಪ್ ಇದೀಗ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿದ್ದಾರೆ. ಮುಂದೆ ಯಾರು ಕಾರ್ಯಕ್ರಮ ನಡೆಸಿ ಕೊಡ್ತಾರೆ ಅನ್ನೋ ಪ್ರಶ್ನೆಗೆ ಮೊದಲು ಕೇಳಿ ಬರುವ ಹೆಸರು ನಟ ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿಯ ವಿಜೇತ ಈ ನಟನ ಹೆಸರು ಮುಂಚೂಣಿಯಲ್ಲಿದೆ. ಇನ್ನು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೆಸರು ಕೇಳಿಬರುತ್ತಿದೆ. ಈಗಾಗಲೇ ಕನ್ನಡದ ಕೆಲವು ರಿಯಾಲಿಟಿ ಶೋದಲ್ಲಿ ಶಿವರಾಜ್ ಕುಮಾರ್ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ಹಾಗೇ ಇತ್ತೀಚಿನ ವರ್ಷಗಳ ಕನ್ನಡದ ಸಿನಿ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಡಾಲಿ ಧನಂಜಯ್ ಹೆಸರು ಕೂಡ ಬಿಗ್ ಬಾಸ್ ಹೋಸ್ಟ್ ರೇಸ್‌ನಲ್ಲಿದೆ. ವೀಕ್ ಅಂಡ್ ವಿತ್ ರಮೇಶ್ ಖ್ಯಾತಿಯ ರಮೇಶ್ ಅರವಿಂದ್ ಹೆಸರು ಬಿಗ್‌ಬಾಸ್-12ನೇ ಆವೃತ್ತಿಗೆ ಕೇಳಿಬರುತ್ತಿದೆ.
ಬಿಗ್‌ಬಾಸ್-11 ಆರಂಭವಾಗೋದಕ್ಕೂ ಮುನ್ನವೇ ಈ ಬಾರಿ ಸುದೀಪ್ ಹೋಸ್ಟ್ ಮಾಡೋದಿಲ್ಲ ಅನ್ನೋ ಗಾಳಿಸುದ್ದಿಗಳು ಭಾರೀ ವೈರಲ್ ಆಗಿದ್ದವು. ಆದರೆ ಅದಕ್ಕೆ ಪುಷ್ಟಿ ನೀಡುವಂತೆ ಸುದೀಪ್ ಕೂಡ ತಾವು ಸಿನಿಮಾದತ್ತ ದೃಷ್ಟಿ ಹರಿಸ ಬೇಕು, ಜನ ತನ್ನನ್ನು ಮರೆತು ಬಿಡುತ್ತಾರೆ ಅನ್ನೋ ಮಾತುಗಳನ್ನು ಆಡುತ್ತಲೇ ಬರುತ್ತಿದ್ದರು.
ನಿಜಕ್ಕೂ ಬಿಗ್‌ಬಾಸ್‌ನಲ್ಲಿ ಸುದೀಪ್ ಹೊರತುಪಡಿಸಿ ಬೇರೆ ನಟರನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಬಿಗ್‌ಬಾಸ್ ಅಂದರೆ ಕಿಚ್ಚ ಸುದೀಪ್, ಕಿಚ್ಚ ಸುದೀಪ್ ಅಂದರೆ ಬಿಗ್ ಬಾಸ್ ಅನ್ನೋ ರೀತಿಯಲ್ಲಿತ್ತು ರಿಯಾಲಿಟಿ ಶೋ. ಆದರೆ ಸುದೀಪ್ ಏನಾದ್ರೂ ನಿಲುವು ಬದಲಾಯಿಸ್ತಾರಾ? ಇಲ್ಲವೇ ಗುಡ್‌ಬೈಗೆ ಗಟ್ಟಿಯಾಗಿ ನಿಂತುಕೊಳ್ಳುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.