ಸಾಂಸ್ಕೃತಿಕ

ಕಾಶೀನಾಥ್ ನಟನೆಯ “ಅವಳೇ ನನ್ನ ಹೆಂಡ್ತಿ” ನಿರ್ದೇಶಕ ಉಮೇಶ್ ನಿಧನ

Views: 41

ಕನ್ನಡ ಕರಾವಳಿ ಸುದ್ದಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಚಂದನವದ ಖ್ಯಾತ ನಿರ್ದೇಶಕ ಎಸ್.ಉಮೇಶ್ ಅವರು ಇಂದು ನಿಧನರಾಗಿದ್ದು, ಸ್ಯಾಂಡಲ್‌ವುಡ್ ನ ಹಲವು ಕಲಾವಿದರು ಹಾಗೂ ತಂತ್ರಜ್ಞರು ಅವರ ಪಾರ್ಥಿವ ಶರೀರದ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.

1974ರಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿ ನಂತರ 1988ರಲ್ಲಿ ಕಾಶೀನಾಥ್ ನಟನೆಯ ‘ಅವಳೇ ನನ್ನ ಹೆಂಡ್ತಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ ರಾದ ಉಮೇಶ್ ಅವರು, ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ತುಂಬಿದ ಮನೆ’, ಟೈಗರ್ ಪ್ರಭಾಕರ್ ಅಭಿನಯದ ‘ಪ್ರೇಮ ಪರೀಕ್ಷೆ’, ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ ‘ಗಂಡು ಸಿಡಿಗುಂಡು’, ದೇವರಾಜ್ ನಟನೆಯ ‘ದಾಯಾದಿ’ ಸೇರಿದಂತೆ 24 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು:ನಿರ್ದೇಶಕರಾಗಿ ಅಲ್ಲದೆ ವಿನೋದ್ ರಾಜ್ ಹಾಗೂ ಶ್ರುತಿ ಅಭಿನಯದ ‘ಬನ್ನಿ ಒಂದ್ಬಲ ನೋಡಿ’ ನೋಡಿ ಸೇರಿದಂತೆ ಮೂರು ಚಿತ್ರಗಳನ್ನು ನಿರ್ಮಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಉಮೇಶ್ ಅವರಿಗೆ ಕೊರೊನಾ ತಗುಲಿ ಚಿಕಿತ್ಸೆಗೂ ಪರದಾಡುವ ಪರಿಸ್ಥಿತಿ ಉಂಟಾಗಿ ಸಹಾಯಕ್ಕಾಗಿ ಮನವಿ ಮಾಡಿದ್ದರು.

 

Related Articles

Back to top button