ಕಾಳಾವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಶೆಟ್ಟಿಗಾರ ?

Views: 3
ಕಾಳಾವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಶೆಟ್ಟಿಗಾರ ?
ಕುಂದಾಪುರ: ಗ್ರಾಮ ಪಂಚಾಯಿತಿಗಳ ಎರಡುವರೆ ವರ್ಷದ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು. ಇನ್ನೂ ಎರಡುವರೆ ವರ್ಷದ ಅವಧಿಗೆ ಸರಕಾರ ಮೀಸಲಾತಿ ಪ್ರಕಟಿಸಿದ್ದು, ಹಿಂದುಳಿದ ವರ್ಗ (ಎ) ಮೀಸಲಾತಿಗೆ ಅಧ್ಯಕ್ಷ ಸ್ಥಾನಕ್ಕೆ ಕಮ್ಯುನಿಸ್ಟ್ ಬೆಂಬಲಿತ ಮಂಜುನಾಥ್ ಶೆಟ್ಟಿಗಾರ್ ಅವರು ವಕ್ವಾಡಿ,ಕಾಳಾವರ,ಅಸೋಡು ಗ್ರಾಮದ ವ್ಯಾಪ್ತಿಯ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಕ್ಕೆ ಆಯ್ಕೆಯಾಗಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಚಿಟ್ಟೂರಿನ ನಿವಾಸಿಯಾಗಿದ್ದು, 38 ಪ್ರಾಯದ ಕಾಳಾವರದ ಸಲ್ವಾಡಿ -ಕಕ್ಕೇರಿ ನಿವಾಸಿ ಮಂಜುನಾಥ್ ಶೆಟ್ಟಿಗಾರ ಅವರ ಕುಟುಂಬದವರು ಕಳೆದ 40 ವರ್ಷಗಳಿಂದಲೂ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾ ಪರಮೇಶ್ವರಿ ದೇವಳದ ಆರಾಧಕರಾಗಿದ್ದಾರೆ. ಮತ್ತು ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ (ರಿ) ಸಕ್ರೀಯ ರಾಗಿದ್ದಾರೆ. ಕಾಳಾವರ ಗ್ರಾಮ ಪಂಚಾಯಿತಿಗೆ ಎರಡನೇ ಭಾರಿಗೆ ಅಧ್ಯಕ್ಷ ಸ್ಥಾನಕ್ಕೆ ಶೆಟ್ಟಿಗಾರ್ ಸಮಾಜದವರು ಆಯ್ಕೆಯಾಗಿದ್ದರು.ಈ ಹಿಂದೆ ಅಸೋಡಿನ ಚಂದ್ರಶೇಖರ್ ಶೆಟ್ಟಿಗಾರ್ ಪಂಚಾಯಿತಿಯ ಪ್ರಥಮ ಅಧ್ಯಕ್ಷರಾಗಿದ್ದರು.
ಆಗಸ್ಟ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ
ಸಮಸ್ತ ಪದ್ಮಶಾಲಿ/ ಶೆಟ್ಟಿಗಾರ್ ಸಮಾಜ ಬಾಂಧವರಿಂದ ಅಭಿನಂದನೆಗಳು.
ನಿಮ್ಮಿಂದ ಸಮಾಜದ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಲೆಂದು ‘ಕನ್ನಡ ಕರಾವಳಿ’ ಪತ್ರಿಕಾ ಬಳಗದರಿಂದ ಶುಭ ಹಾರೈಕೆಗಳು.