ಇತರೆ

ಕುಂದಾಪುರದಲ್ಲಿ ಅಪರಿಚಿತ ಮೃತ ದೇಹ ಪತ್ತೆ, ವಾರಸುದಾರರ ಪತ್ತೆಗಾಗಿ ಮನವಿ

Views: 558

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಕಸಬಾ ಗ್ರಾಮದ ಶಾಸ್ತ್ರಿ ಪಾರ್ಕನ  ಪೊಲೀಸ್ ಓಪಿ  ಬಳಿ ಸುಮಾರು 40 ರಿಂದ 45 ಪ್ರಾಯದ ಅಪರಿಚಿತ ಗಂಡಸಿನ ಮೃತ ಶರೀರ ಪತ್ತೆಯಾಗಿದ್ದು,ಗೋದಿ ಮೈ ಬಣ್ಣದ ಸುಮಾರು 55 ಆಡಿ ಎತ್ತರವಿದ್ದು, ಬಾಯಿ ತೆರೆದಿದ್ದು ಬಾಯಲ್ಲಿ ನೀರೂರಿಸುವ ವಾಂತಿ ಮಾಡಿದ ಸ್ಥಿತಿಯಲಿ ಕಂಡು ಬಂದಿರುತ್ತದೆ, ಕಣ್ಣು ಆರೆ ತೆರೆದಿರುತ್ತದೆ, ಸಪೂರ ಶರೀರ ತಿಳಿ ಆಕಾಶ ನೀಲಿ. ಬಣ್ಣದ ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬಿಳಿ ಕಪ್ಪು ಗೆರೆ ಇರುವ ಶಾಲ್ ಮತ್ತು ಕಪ್ಪು ಬಣ್ಯದ ನೈಟ್ ಪ್ಯಾಂಟ್ ಧರಿಸಿದ್ದು ಕಪ್ಪು ತಲೆ ಕೂದಲು ಹಾಗೂ ಕಪ್ಪು ಮೀಸೆ ಇರುತ್ತದೆ, ಮೃತ ಶರೀರದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯಗಳು ಇರುವುದು ಕಂಡು ಬಂದಿರುವುದಿಲ್ಲ, ಸದ್ರಿ ವ್ಯಕ್ತಿಯು ಎಲ್ಲಿಂದಲೋ 25-02-2026 26-02-2026 12:00 03:30 ಗಂಟೆಯ ಮಧ್ಯಾವಧಿಯಲಿ. ಯಾವುದೋ ಆನಾರೋಗ್ಯದ ಕಾರಣದಿಂದ ಅಥವಾ ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ, ಆದ್ದರಿಂದ ಮೃತನ ವಾರಿಸುದಾರರನ್ನು ಪತ್ತೆ ಮಾಡುವ ಬಗ್ಗೆ, ಹಾಗೂ ಮೃತದೇಹದ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಕೋರಿಕೆಯಾಗಿರುತ್ತದೆ.

ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ: 07/2026 ಕಲಂ: 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ. ಸದ್ರಿ ವ್ಯಕ್ತಿಯ ರಕ್ತ ಸಂಬಂಧಿಕರು, ವಾರೀಸುದಾರರು ಯಾರಾದರೂ ಇದ್ದಲಿ ಕುಂದಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

ಅಪರಿಚಿತ ವ್ಯಕ್ತಿಯ ಚಹರೆ ಗುರುತು:40-45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ, ಚಹರೆ: ಸುಮಾರು 5’5′ ಆಡಿ ಎತ್ರರವಿದ್ದು ಗೋದಿ ಮೈ ಬಣ್ಣು ಸಪೂರ ಶರೀರ, ತಿಳಿ ಆಕಾಶ ನೀಲಿ ಬಣ್ಣದ ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬಿಳಿ ಕಪ್ಪು ಗೆರೆ ಇರುವ ಸಾಲ್ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದು ಕಪ್ಪು ತಲೆ ಕೂದಲು ಹೊಂದಿದ್ದಾರೆ.

ಈ ಮೇಲ್ಕಂಡ ವ್ಯಕ್ತಿಯ ರಕ್ತ ಸಂಬಂಧಿಕರು ವಾರೀಸುದಾರರು ಯಾರಾದರೂ ಪತ್ತೆಯಾದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:: 08254-230338 /  9480805422/9480805455/8277988957/ 8277988959

 

 

Related Articles

Back to top button
error: Content is protected !!