ಶರಣಾಗಲಿದ್ದ ನಕ್ಸಲ್ ತಂಡದ ನಾಯಕನಿಂದಲೇ ಗುಂಡು ಹಾರಿಸಿ ಹತ್ಯೆ
Views: 49
ಕನ್ನಡ ಕರಾವಳಿ ಸುದ್ದಿ: ತನ್ನ 12 ಸಹಚರರೊಂದಿಗೆ ಪೊಲೀಸರಿಗೆ ಶರಣಾಗಲು ಸಿದ್ಧವಾಗಿದ್ದ ನಕ್ಸಲ್ ಕಮಾಂಡರ್‌ನನ್ನು ಆತನ ಸಹವರ್ತಿ, ಉನ್ನತ ಶ್ರೇಣಿಯ ಮಾವೋವಾದಿ ನಕ್ಸಲ್ ನಾಯಕನೇ ಕೊಂದು, ಬಳಿಕ ಶವವನ್ನು ಅರಣ್ಯದಲ್ಲಿ ಹೂತು ಹಾಕಿರುವ ಆಘಾತಕಾರಿ ಘಟನೆ ಒಡಿಶಾ ರಾಜ್ಯದಲ್ಲಿ ನಡೆದಿದೆ.
ತಲೆ ಮೇಲೆ 22 ಲಕ್ಷ ರು. ಇನಾಮು ಹೊಂದಿದ್ದ ಯುವ ನಕ್ಸಲ್ ಕಮಾಂಡರ್ ಅನ್ವೇಶ್ ಅಲಿಯಾಸ್ ರೇಣು ಕಂಧಮಲ್ ಕಾಳಹಂದಿ ಬೌಥ್ ನಾಯಗರ್ (ಕೆಕೆಬಿಎನ್) ಮಾವೋವಾದಿ ಸಂಘಟನೆಯಲ್ಲಿ ವಿಭಾಗೀಯ ಸಮಿತಿ ಸದಸ್ಯನಾಗಿದ್ದ. ಅನ್ವೇಶ್ ಛತ್ತೀಸ್‌ಗಢ ರಾಜ್ಯದ ಸುಕ್ಕಾ ಜಿಲ್ಲೆಯ ನಿವಾಸಿ.
ಅನ್ವೇಶ್‌ನ ಮೃತದೇಹ ಬುಧವಾರ ಠಾಣೆ ದಾರಿಂಗ್‌ಬಾದಿ ಪೊಲೀಸ್ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನ್ವೇಶ್‌ನನ್ನು ಕುಖ್ಯಾತ ಮಾವೋವಾದಿ ನಾಯಕ ಸುಕ್ರು ಎಂಬಾತನೇ ಜನವರಿ 29ರಂದೇ ಕೊಂದು ಅರಣ್ಯದಲ್ಲಿ ಹೂತು ಹಾಕಿದ್ದ ಎಂಬುದು ಪ್ರಾಥಮಿಕ ತಿಳಿದುಬಂದಿದೆ. ತನಿಖೆಗಳಿಂದ ತಿಳಿದು ಬಂದಿದೆ.
ಕಂಧಮಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಸಿ.ಹರೀಶ್ ಹೇಳುವ ಪ್ರಕಾರ, ರಾಜ್ಯ ಸರಕಾರದ ಕರೆಯ ಮೇರೆಗೆ ಅನ್ವೇಶ್ ತನ್ನ ತಂಡದ 12 ಸಹಚರರ ಜತೆಗೂಡಿ ಪೊಲೀಸರಿಗೆ ಶರಣಾಗಲು ಬಯಸಿದ್ದ. ಅದನ್ನು ಆ ಪ್ರದೇಶದಲ್ಲಿನ ನಕ್ಸಲ್ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ನಕ್ಸಲ್ ನಾಯಕ
ಸುಕ್ರು, ಈ ಶರಣಾಗತಿ ನಡೆಯನ್ನು ಒಪ್ಪಲಿಲ್ಲ. ಹಾಗಿದ್ದೂ ತನ್ನ ತಂಡದೊಂದಿಗೆ ಶರಣಾಗುವೆ ಎಂದು ಅನ್ವೇಶ್ ಪಟ್ಟು ಹಿಡಿದಾಗ ಆತನಿಗೆ ಸುಕ್ರುವೇ ಗುಂಡಿಕ್ಕಿ ಸಾಯಿಸಿದ. ಬಳಿಕ ಅನ್ವೇಶ್ ಶವವನ್ನು ಸುಕ್ರು ಅರಣ್ಯದಲ್ಲೊಂದೆಡೆ ಹೂತು ಹಾಕಿದ.






