ಇತರೆ
ಕಾಳಾವರ ಮೀನು ಹಿಡಿಯಲು ಕೆರೆಗೆ ತೆರಳಿದ ಯುವಕ ನೀರು ಪಾಲು

Views: 24
ಕುಂದಾಪುರ ಇಲ್ಲಿನ ಕಾಳಾವರ ಮಹಾಲಿಂಗೇಶ್ವರ ಕಾಳಿಂಗ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಹೆರಿಕೆರೆಗೆ ಮೀನು ಹಿಡಿಯಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಮೃತ ಯುವಕ ಕಾಳಾವರದ ನರಿಕೊಡ್ಲು ಮನೆ ಹರೀಶ್ ಪೂಜಾರಿ( 35 ).ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.ಪತ್ನಿ ಈ ಹಿಂದೆ ಮೃತಪಟ್ಟಿದ್ದರು.
ರವಿವಾರ ನಾಲ್ಕು ಜನರ ತಂಡ ಸಂಜೆ ಹೆರಿಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಮೀನಿಗೆ ಹಾಕಿದ ಬಲೆಯನ್ನು ತರಲು ಕೆರೆಗೆ ಹಾರಿದ ಹರೀಶ್ ಪೂಜಾರಿ ಮೇಲಕ್ಕೆ ಬರದಿದ್ದನ್ನು ಗಮನಿಸಿದ ತಂಡದಲ್ಲಿದ್ದವರು ಆತನ ರಕ್ಷಣೆಗೆ ಧಾವಿಸಿದರೂ ಸಫಲವಾಗಲಿಲ್ಲ. ಇತ್ತೀಚಿಗೆ ಈ ಕೆರೆಯನ್ನು ಹೂಳೆತ್ತಿದ್ದರಿಂದ ಆಳವಾದ ಕೆರೆಯಲ್ಲಿ ಮಳೆ ಬಂದು ನೀರು ತುಂಬಿಕೊಂಡಿದೆ.
ಪ್ರಕರಣ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.