ಯುವಜನ
ಕಾರಿನ ಸನ್ ರೂಫ್ ತೆಗೆದು ಯುವತಿಯರಿಗೆ ಚುಂಬಿಸಿ ಹುಚ್ಚಾಟದ ದೃಶ್ಯ ಭಾರಿ ವೈರಲ್

Views: 330
ಕನ್ನಡ ಕರಾವಳಿ ಸುದ್ದಿ: ಇಂದಿನ ಯುವ ಜನತೆಯ ಕೆಲ ಸಭ್ಯತೆಯನ್ನು ಮೀರಿದ ದುರ್ವವರ್ತೆನೆಗೆ ಮರ್ಯಾದೆಯಿಂದ ಬದುಕುವ ಜನರು, ನಾಗರಿಕರು ತಲೆ ತಗ್ಗಿಸಿಯೇ ನಡೆಯಬೇಕಾದ ಸ್ಥಿತಿ ಎದುರಾಗಿದೆ.
ಇದೀಗ ಮಧ್ಯರಾತ್ರಿ ಯುವಕನೊಬ್ಬ ಕಾರಿನ ಸನ್ ರೂಫ್ ತೆಗೆದು ಯುವತಿಯರಿಗೆ ಚುಂಬಿಸಿ ರೋಡ್ ರೋಮಿಯೋನಂತೆ ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಭಾರಿ ವೈರಲ್ ಆಗಿದೆ.
ಮೇ 26ರಂದು ಬೆಂಗಳೂರಿನ ಟ್ರಿನಿಟಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆಗೆದು ಯುವಕ ತನ್ನ ಜೊತೆಯಲ್ಲಿದ್ದ ಯುವತಿಯರಿಬ್ಬರನ್ನು ಚುಂಬಿಸಿ ಪುಂಡಾಟ ಮೆರೆದಿದ್ದಾನೆ. ಈ ದೃಶ್ಯ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಸವಾರರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ರಾಜಾರೋಷವಾಗಿ ನಡುರಸ್ತೆಯಲ್ಲಿ ಕಾರಿನಲ್ಲಿ ಇಂತಹ ವರ್ತನೆ ತೋರಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.