‘ಕಾಟೇರ’ ಆರ್ಭಟ ಜೋರಾಗಿದೆ..’KGF’ ಹಾಗೂ ‘ಕಾಂತಾರ’ ಬಾಕ್ಸಾಫೀಸ್ ದಾಖಲೆ ‘ಕಾಟೇರ’ ಮುರಿಯಿತೆ..!?

Views: 68
ಸಂಕ್ರಾಂತಿ ಸಂಭ್ರಮದಲ್ಲೂ ‘ಕಾಟೇರ’ ಆರ್ಭಟ ಜೋರಾಗಿದೆ. 2ನೇ ವೀಕೆಂಡ್‌ನಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಆಗುತ್ತಿದೆ. ಇನ್ನು ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಸದ್ದು ಮಾಡ್ತಿದೆ. 2 ವಾರಕ್ಕೆ ಸಿನಿಮಾ 157.42 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಚಿತ್ರತಂಡದ ಆಪ್ತರಿಂದಲೇ ಮಾಹಿತಿ ಲಭ್ಯವಾಗುತ್ತಿದೆ.
3ನೇ ವೀಕೆಂಡ್‌ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ವಿದೇಶಗಳಲ್ಲಿ ಕೂಡ ‘ಕಾಟೇರ’ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಸಿನಿಮಾ ತೆಲುಗು, ತಮಿಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ.
ಮೊದಲ ವಾರದಲ್ಲಿ 406 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 2ನೇ ವಾರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡಿತ್ತು. 2ನೇ ವಾರದಲ್ಲಿ462 ಥಿಯೇಟರ್ ಮತ್ತು 72 ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಸದ್ಯ 3ನೇ ವಾರದಲ್ಲಿ ಒಟ್ಟು 416 ಥಿಯೇಟರ್ ಮತ್ತು 72 ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವುದಾಗಿ ಹೇಳಲಾಗುತ್ತಿದೆ.
ಶೀಘ್ರದಲ್ಲೇ ‘ಕಾಟೇರ’ 25ನೇ ದಿನಕ್ಕೆ ಕಾಲಿಡಲಿದ್ದು ಸಿನಿಮಾ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ‘ಕಾಟೇರ’ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ 2 ವಾರಕ್ಕೆ 157.42 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗಿದೆ. ಆ ಲೆಕ್ಕದಲ್ಲಿ ಕನ್ನಡದಲ್ಲಿ ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಯನ್ನು ‘ಕಾಟೇರ’ ಮುರಿದಿದೆ ಎನ್ನುವುದು ಕೆಲವರ ವಾದ.
ಚಾಪ್ಟರ್-1′, ‘KGF ಚಾಪ್ಟರ್- 2 ಹಾಗೂ ‘ಕಾಂತಾರ’ ನಿಮಾಗಳ ದಾಖಲೆಯನ್ನು ಕೂಡ ‘ಕಾಟೇರ’ ಅಳಿಸಿ ಹೊಸ ದಾಖಲೆ ನಿರ್ಮಿಸಿರುವುದಾಗಿ ಚರ್ಚೆ ನಡೀತಿದೆ. ‘KGF-2’ ಒಟ್ಟು 1200 ಕೋಟಿ ರೂ. ಗಳಿಕೆ ಕಂಡು ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ‘ಕಾಂತಾರ’ ಸಿನಿಮಾ ಜಾಗ ಮಾಡಿಕೊಂಡಿದೆ. ಈ ಚಿತ್ರ 400 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ನಂತರದ ಸ್ಥಾನದಲ್ಲಿ 250 ಕೋಟಿ ರೂ. ಬಾಚಿದ KGF-1 ಸಿನಿಮಾ ಇದೆ. ಆದರೆ ‘KGF’ ಸರಣಿ ಸಿನಿಮಾಗಳು ಹಾಗೂ ‘ಕಾಂತಾರ’ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದವು. ಆದರೆ ಬರೀ ಕನ್ನಡ ವರ್ಷನ್ ಲೆಕ್ಕ ಹಾಕಿದರೆ ಎಲ್ಲಾ ಸಿನಿಮಾಗಳ ದಾಖಲೆ ಮೀರಿಸಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಕೆಲವರು ಇದನ್ನು ಒಪ್ಪಲು ಸಿದ್ಧರಿಲ್ಲ.
‘KGF’-1 ಸಿನಿಮಾ ಕನ್ನಡ ವರ್ಷನ್ 134 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಮಾತ್ರ ‘ಕಾಟೇರ’ ಮುರಿದಿದ್ದಾನೆ. ‘ಕಾಂತಾರ’ ಕನ್ನಡ ವರ್ಷನ್ 160 ಕೋಟಿ ರೂ. ಹಾಗೂ ‘KGF’-2 ಸಿನಿಮಾ 165 ಕೋಟಿ ರೂ. ಬಾಚಿದ್ದವು. ಹಾಗಾಗಿ ‘ಕಾಟೇರ’ ಸದ್ಯಕ್ಕೆ 3ನೇ ಸ್ಥಾನದಲ್ಲಿದ್ದಾನೆ ಎನ್ನುವ ವಾದವನ್ನು ಮುಂದೆ ಇಡುವವರು ಇದ್ದಾರೆ. ‘ಕಾಟೇರ’ ಬರೀ 140 ಕೋಟಿ ರೂ. ಅಷ್ಟೇ ಗಳಿಸಿರುವುದು ಎನ್ನುವವರು ಇದ್ದಾರೆ. ಇದೆಲ್ಲದರ ನಡುವೆ ‘ಜೇಮ್ಸ್’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾ ಕಲೆಕ್ಷನ್ ಅನ್ನು ಕೂಡ ‘ಕಾಟೇರ’ ಮೀರಿಸಿರುವುದಾಗಿ ಹೇಳಲಾಗುತ್ತಿದೆ. ಕನ್ನಡ ಸಿನಿಮಾಗಳ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ನಿರ್ಮಾಪಕರು ಮಾಹಿತಿ ನೋಡುವುದಿಲ್ಲ. ಹಾಗಾಗಿ ಇಂತಹ ಗೊಂದಲ ಮೂಡುವುದು ಸಹಜ. ನಮ್ಮ ಹೀರೊ ಗ್ರೇಟ್ ಎಂದು ಹೇಳಲು ಅಭಿಮಾನಿಗಳು ಕೆಲವೊಮ್ಮೆ ಇಂತಹ ಕಲೆಕ್ಷನ್ ಲೆಕ್ಕಾಚಾರ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಕ್ರಿಯೇಟ್ ಮಾಡುತ್ತಾರೆ. ಆದರೆ ‘ಕಾಟೇರ’ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿರುವುದಂತೂ ನಿಜ.