ಜನಮನ

ಕಾಂತಾರದ ರಿಷಬ್ ಶೆಟ್ಟಿ ಖರೀದಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

Views: 369

ಕನ್ನಡ ಕರಾವಳಿ ಸುದ್ದಿ: ರಿಷಬ್ ಶೆಟ್ಟಿ ಅವರು ಟೊಯೋಟಾ ಕಂಪನಿಯ ಕಪ್ಪು ಬಣ್ಣದ ವೆಲ್ಫೈರ್ ದುಬಾರಿ ಕಾರನ್ನು ಖರೀದಿಸಿದ್ದಾರೆ.ರಿಷಬ್ ಶೆಟ್ಟಿ ಖರೀದಿಸಿದ ಟೊಯೋಟಾ ಕಂಪನಿ ಈ ಕಾರಿನ ಬೆಲೆ ಸದ್ಯದ ದರ 1 ಕೋಟಿ 22 ಲಕ್ಷದಿಂದ 1 ಕೋಟಿ 32 ಲಕ್ಷ ರೂಪಾಯಿಯವರೆಗೂ ಇದೆ. ಆನ್ ರೋಡ್‌ಗೆ ಈ ದುಬಾರಿ ಕಾರಿನ ಬೆಲೆ 1 ಕೋಟಿ 40 ಲಕ್ಷ ರೂಪಾಯಿ ಎನ್ನಲಾಗಿದೆ.

ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಲ್ಲಿ ನಡೆದ ವಾರಾಹಿ ಪಂಜುರ್ಲಿ ದೈವದ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿದ್ದರು. ನೇಮಕ್ಕೆ ಬಂದು ದೈವದ ಬಳಿ ಬೇಡಿಕೊಂಡಿದ್ದ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ಅಭಯ ನೀಡಿತ್ತು.

ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ಅವರಿಗೆ ನಿನಗೆ ಜಗತ್ತಿನೆಲ್ಲೆಡೆ ದುಶ್ಮನ್‌ಗಳಿದ್ದಾರೆ. ನಿನ್ನ ಸಿನಿಮಾ ಎಂಬ ಸಂಸಾರವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ. ನನಗೆ ಸೇವೆ ನೀಡುವ ಹರಕೆ ಹೇಳಿಕೋ 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ ಎಂದು ದೈವ ಅಭಯ ನೀಡಿತ್ತು.

Related Articles

Back to top button