ಕಡಬ: ಕಾಲೇಜು ವಿದ್ಯಾರ್ಥಿನಿಯರ ಮುಖಕ್ಕೆ ಆ್ಯಸಿಡ್: ಆರೋಪಿಗಳನ್ನು ಹಿಡಿದ ವಿದ್ಯಾರ್ಥಿಗಳು..!

Views: 325
ಪರೀಕ್ಷೆಗಾಗಿ ಕೊನೆಯ ಹಂತದ ಸಿದ್ಧತೆ ಮಾಡಿಕೊಂಡು ಕಾಲೇಜು ಆವರಣದಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಅಸಿಡ್ ದಾಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಅಬೀನ್ ಎಂಬಾತನಿಂದ ಈ ದುಷ್ಕೃತ್ಯ ನಡೆದಿದ್ದು, ಮೂವರು ವಿದ್ಯಾರ್ಥಿನಿಯರ ಮುಖದಕ್ಕೆ ಗಂಭೀರ ಸುಟ್ಟ ಗಾಯಗಳಾಗಿದೆ. ಮೂವರು ವಿದ್ಯಾರ್ಥಿನಿಯರನ್ನು ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಇಂದು ಮುಂಜಾನೆ ಅಲಿನಾ ಸಿ.ಬಿ, ಅರ್ಚನಾ ಹಾಗೂ ಅಮೃತ ಎಂಬ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಗಾಗಿ ಕಾಲೇಜು ವಠಾರದಲ್ಲಿ ಓದಿಕೊಂಡಿದ್ದರು. ಈ ವೇಳೆ ತಲೆಗೆ ಹ್ಯಾಟ್ ಹಾಗೂ ಮಾಸ್ಕ್ ಧರಿಸಿ ಬಂದಿದ್ದ ಯುವಕನೊಬ್ಬ ಮೂವರ ಬಳಿ ಬಂದು ಅಸಿಡ್ ಎಸೆದಿದ್ದಾನೆ. ಅಸಿಡ್ ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಕಾಲೇಜು ವಿದ್ಯಾರ್ಥಿಗಳು ಹಿಡಿದು ಹೆಡೆಮುರಿ ಕಟ್ಟಿದ್ದಾರೆ. ಬಳಿಕ ತಕ್ಷಣ ವಿದ್ಯಾರ್ಥಿನಿಯರು ಸ್ಥಳಿಯ ಆಸ್ಪತ್ರೆಗೆ ರವಾನಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಆಬೀನ್ ಟಾರ್ಗೆಟ್ ಯಾರಾಗಿದ್ರೂ ಹಾಗೂ ಯಾಕಾಗಿ ಈ ಕೃತ್ಯ ಎಸಗಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಸಿಡ್ ದಾಳಿಯಿಂದ ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಸ್ವರೂಪದ ಸುಟ್ಟಗಾಯ ಆಗಿದೆ ಎಂದು ತಿಳಿದು ಬಂದಿದೆ