ಕರಾವಳಿ

ಉಡುಪಿ ಸೀರೆ ಪುನಶ್ಚೇತನಕ್ಕೆ ಕರಾವಳಿ ಶೆಟ್ಟಿಗಾರರ ಪರಿಶ್ರಮಕ್ಕೆ ಸಿಕ್ಕ ಫಲ 

Views: 5

ಭಾರತೀಯ ಮಹಿಳೆಯರಿಗೆ ಆಭರಣಗಳು ಎಷ್ಟು ಮುಖ್ಯವೋ ಸೀರೆಗಳು ಅಷ್ಟೇ ಅಮೂಲ್ಯ ವಸ್ತುವಾಗಿದೆ. ಸಾಂಪ್ರದಾಯಿಕ ಸಂದರ್ಭದಲ್ಲಿ ಹಬ್ಬ ಹರಿದಿನಗಳ ಪ್ರಮುಖ ಕಾರ್ಯಕ್ರಮದಲ್ಲಿ ಮಹಿಳೆಯರು ಸೀರೆ ಉಟ್ಟು ಸಂಭ್ರಮಿಸುತ್ತಾರೆ.

ನಮ್ಮ ದೇಶದಲ್ಲಿ ನಾನಾ ರೀತಿಯ ಸೀರೆಗಳಿದ್ದು, ಇವುಗಳಲ್ಲಿ ಕೈಮಗ್ಗದಲ್ಲಿ ನೇಯ್ದ ಸೀರೆಗಳು ಸಾಕಷ್ಟು ಹೆಸರು ಮಾಡಿವೆ. ಮಾರುಕಟ್ಟೆಯಲ್ಲಿ ಸಿಗುವ ವೈವಿಧ್ಯಮಯ ಸೀರೆಗಳ ನಡುವೆ ಉಡುಪಿ ಸೀರೆ ಎದ್ದು ಕಾಣುತ್ತಿದೆ. ಈ ಸೀರೆಗಳು ಪ್ರಾದೇಶಿಕ ಇತಿಹಾಸ ಮತ್ತು ಸಂಸ್ಕೃತಿ ಸಾರುತ್ತದೆ.

ಉಡುಪಿ ಸೀರೆ, ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೈಮಗ್ಗದಲ್ಲಿ ನೇಕಾರರು ಕೈಯಲ್ಲಿ ನೇಯ್ದ ಸೀರೆ ಹೆಸರುವಾಸಿಯಾಗಿದೆ.

ಕೈಮಗ್ಗದ ಸೀರೆಯು ಭಾರತದ ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನೇಕಾರ ಜನಾಂಗದವರು ಜೀವನಾಧಾರವಾಗಿ ನಡೆಸಿಕೊಂಡು ಬಂದ ಕುಲ ಕಸುಬಾಗಿದೆ.ಪ್ರಮುಖವಾಗಿ ‘ಶೆಟ್ಟಿಗಾರ್’ ಎಂಬ ಜಾತಿಗೆ ಸೇರಿದ ಜನರು ಈ ಕೆಲಸದಲ್ಲಿ ಪಾರಂಪರಾಗತವಾಗಿ ತೊಡಗಿಸಿಕೊಂಡಿದ್ದರು.

ಮಹಾತ್ಮ ಗಾಂಧೀಜಿಯವರು ಸಹಕಾರ ಚಳುವಳಿಯಿಂದ ಪ್ರೇರಿತರಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೇಕಾರರು ತಮ್ಮದೇ ನೇಕಾರ ಸಂಘಗಳನ್ನು ಸ್ಥಾಪಿಸಿ ಅದರ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು.

ಬಾಸೆಲ್ ಮಿಷನ್ ರೆ.ವೆಚ್ಜ್ ಎಂಬುವವರಿಂದ 1844ರಲ್ಲಿ ಅನೇಕರಿಗೆ ಆರಂಭವಾಯಿತು. ಆ ಕಾಲದಲ್ಲಿ ಜೇಡರ, ಸಾಲಿಗ, ಬಿಲ್ಲವ, ಬಂಟ, ಮುಸ್ಲಿಂ,ಕ್ರಿಶ್ಚನರು ನೇಯ್ಯುವ ಕೆಲಸ ಮಾಡುತ್ತಿದ್ದರು.

ಭಾಷೆಲ್ ಮಿಷನ್ ರವರು ಪರಿಚಯಿಸಿದ ‘ಮಲಬಾರ್ ಫ್ರೇಮ್’ ಎಂದು ಕರೆಯುವ ಮಗ್ಗದಲ್ಲಿ ಹತ್ತಿಯ ನೂಲಿನಿಂದ ಸಾದಾ ವಿನ್ಯಾಸದಲ್ಲಿ ಅಥವಾ ಸಣ್ಣ ಚೌಕುಳಿಯ ವಿನ್ಯಾಸದಲ್ಲಿ ಈ ಸೀರೆಯನ್ನು ತಯಾರಿಸಲಾಗುತಿತ್ತು.

ಭಾಷೆಲ್ ಮಿಷನ್ ರವರು 1844 ರಲ್ಲಿ ಕೈಮಗ್ಗದ ಗಿರಣಿಗಳನ್ನು ಸ್ಥಾಪಿಸಿದರು. ಜರ್ಮನಿಯಿಂದ ಬಂದ ತಾಂತ್ರಿಕ ಪರಿಣಿತ ಮುಲ್ಲರ್ ಎಂಬುವರು ನಿಯಂತ್ರಕ ಚಕ್ರ (ಪ್ಲೈವೀಲ್) ಗಳನ್ನು ಅಳವಡಿಸಿದರು.

ಹತ್ತಿಯಿಂದ ತಯಾರಿಸಿದ ನೂಲಿನಿಂದ 40, 60 ಹಾಗೂ 80 ಸಂಖ್ಯೆಯ ನೂಲಿನ ಸೀರೆಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಇದರಿಂದ ಸೀರೆಗಳು ಹಾಳಾಗದೆ ಹಲವು ವರ್ಷಗಳ ಕಾಲ ಬಾಳಿಕೆ ಬರುವಂತೆ ಮಾಡಲಾಗುತ್ತದೆ. ಈ ಸೀರೆಗಳಿಗೆ ಅಂದಿನ ದಿನಗಳಲ್ಲಿ ಬಾರಿ ಬೇಡಿಕೆಗಳಿತ್ತು ಆದರೆ ಪವರ್ ಲೂಮ್ ಗಳು ಬಂದಾಗ ಈ ಸೀರೆಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ನೇಕಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು.

ಸ್ವಾವಲಂಬಿ ಬದುಕಿಗೆ ಕಾಯಕಲ್ಪ            ಸೀರೆಗಳಿಗೆ ಪುನಶ್ಚೇತನ ನೀಡಲು ವಿವಿಧ ಎನ್‌ಜಿಒ ಗಳು ಸಾಥ್ ನೀಡಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೀರೆಗಳಿಗೆ ಬೇಡಿಕೆ ಹೆಚ್ಚಿಸಲು ಸಾಕಷ್ಟು ಪರಿಶ್ರಮ ಪಟ್ಟರು. ಈಗಲೂ ಈ ಪರಿಶ್ರಮಗಳು ಮುಂದುವರೆದಿದೆ.

ಯುವಕರು ಮಹಿಳೆಯರಿಗೆ ಕೈಮಗ್ಗ ಬಳಸಲು ತರಬೇತಿ ನೀಡಿದ್ದೆ ಆದರೆ ಉಡುಪಿ ಸೀರೆಗಳಿಗೆ ಮರಳಿ ಜೀವ ತುಂಬಬಹುದು. NGO ಗಳು ಯುವಕರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ.

ಉಡುಪಿ ಜಿಲ್ಲಾ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘಗಳು ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ರಾಷ್ಟ್ರೀಯ ಮತ್ತು ಗ್ರಾಮೀಣ ಜೀವನೋಪಾಯ ಮಿಷನ್ ನ ನೆರವಿನೊಂದಿಗೆ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಈ ವರ್ಷದ ಮಾರ್ಚ್ ನಲ್ಲಿ 25 ಸದಸ್ಯರ ಬ್ಯಾಚಿಗೆ ತರಬೇತಿ ನೀಡಿದೆ.

ಪ್ರತಿಷ್ಠಾನವು ಉಡುಪಿ ಮತ್ತು ಸುತ್ತಮುತ್ತಲಿನ ಆರು ಕೈಮಗ್ಗಗಳನ್ನು ತರಬೇತಿಗಾಗಿ ತರಿಸಿಕೊಂಡಿದೆ.

ಇದೇ ರೀತಿ ಬ್ರಹ್ಮಾವರದ ನೇಕಾರ ಮಂಜುನಾಥ್ ಶೆಟ್ಟಿಗಾರ್ ಅವರ ಮಗಳು ಮತ್ತು ಸೊಸೆ ತರಬೇತಿ ಪಡೆದುಕೊಳ್ಳುತ್ತಿದ್ದು, ಅವರು ಮಾತನಾಡಿ, ನಾನು 40 ವರ್ಷಗಳಿಂದ ಕೈಮಗ್ಗವನ್ನು ನಿರ್ವಹಿಸುತ್ತಿದ್ದೇನೆ ನನ್ನ ಕುಟುಂಬದ ಇಬ್ಬರು ಸದಸ್ಯರ ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದರು.

ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮಾತನಾಡಿ ಯಾವುದೇ ಅನುಭವವಿಲ್ಲದ ಕುಟುಂಬಗಳಿಂದ ಬಂದವರು ತರಬೇತಿ ಪಡೆಯುತ್ತಿದ್ದಾರೆ. ಆದರೆ ಅವರು ಕಲಿಯುವ ವಿಶ್ವಾಸದಲ್ಲಿದ್ದಾರೆ.

ತರಬೇತಿ ಪಡೆದುಕೊಳ್ಳುತ್ತಿದ್ದವರಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನವಾಗಿ 10 ಸಾವಿರ ರೂಪಾಯಿ ಹಾಗೂ ಬಸ್ ಪ್ರಯಾಣದ ವೆಚ್ಚಕ್ಕಾಗಿ ರೂ.2000 ನೀಡಲಾಗುತ್ತಿದೆ.

ವರ್ಷಾಂತ್ಯದ ವೇಳೆಗೆ ತಲಾ 25 ಸದಸ್ಯರಿರುವ ಬ್ಯಾಚ್ ಗಳಿಗೆ ತರಬೇತಿ ನೀಡಲಾಗುವುದು. ಇದು ಒಟ್ಟು ತರಬೇತಿ ಪಡೆದ ನೇಕಾರ ಸಂಖ್ಯೆಯನ್ನು ನೂರಕ್ಕೆ ಕೊಂಡೊಯ್ಯಲ್ಲಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ 20 ವರ್ಷಗಳ ಹಿಂದೆ ಸುಮಾರು 1,500 ಕೈ ಮಗ್ಗ ನೇಕಾರರು ಇದ್ದರು. ಕಡಿಮೆ ಆದಾಯ ಇದ್ದುದರಿಂದ ನೇಕಾರರ ಸಂಖ್ಯೆ ಕುಸಿಯುವ ಆತಂಕ ವಿತ್ತು. ಹಾಗಾಗಿ ಸಂಪ್ರದಾಯ ಪುನಶ್ಚೇತನ ಗೊಳಿಸಲು ತರಬೇತಿ ಕಾರ್ಯಕ್ರಮಗಳು ಆಯೋಜಿಸಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

ಈ ಟ್ರಸ್ಟ್ ಮೊದಲಿಗೆ ನೇಕಾರರ ಹೆಸರು ಮತ್ತು ಚಿತ್ರಗಳನ್ನು ಒಳಗೊಂಡಿರುವ ಆಕರ್ಷಕ ಲೋಗೋದೊಂದಿಗೆ ಸೀರೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು ಈ ಉಪಕ್ರಮವು ಸೀರೆಗಳಿಗೆ ಮಾರುಕಟ್ಟೆಯಲ್ಲಿ ಮರಳಿ ಬೇಡಿಕೆ ಹೆಚ್ಚಾಗಲು ಸಹಾಯ ಮಾಡಿತು.

–ಸುಧಾಕರ ವಕ್ವಾಡಿ

Related Articles

Back to top button