ಕರಾವಳಿ
ಉಡುಪಿ-ಮಂಗಳೂರು ಮುಂದುವರಿದ ಧಾರಾಕಾರ ಮಳೆ “ರೆಡ್ ಅಲರ್ಟ್”

Views: 85
ಕನ್ನಡ ಕರಾವಳಿ ಸುದ್ದಿ: ಕರಾವಳಿಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಮಂಗಳ ವಾರವೂ ಉಡುಪಿ ಮಂಗಳೂರಿನಲ್ಲಿ ರೆಡ್ ಅಲರ್ಟ್ ಇದ್ದು, ಭಾರೀ ಮಳೆಯಾಗುವ ಸಾಧ್ಯತೆ ಇನ್ನೂ ಹೆಚ್ಚಿದೆ.
ಮಂಗಳವಾರ ಜಿಲ್ಲೆಯ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರವೂ ರಜೆ ನೀಡಲಾಗಿತ್ತು. ಗಂಟೆಗೆ 35-45 ರಿಂದ 55 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಸಾರ್ವಜನಿಕರು, ಪ್ರವಾಸಿಗರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.