ಉಡುಪಿ–ಚಿಕ್ಕಮಗಳೂರು: ಸದಾನಂದ ಗೌಡ ಕಾಂಗ್ರೆಸ್ ಅಭ್ಯರ್ಥಿ..? ರಾಜಕೀಯ ವಲಯದಲ್ಲಿ ಚರ್ಚೆ..!

Views: 172
ಉಡುಪಿ: ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮುಖಂಡ ಸುಧೀರ್ ಕುಮಾರ್ ಮರೋಳಿ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿರುವ ಮಧ್ಯೆಯೇ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಸದಾನಂದ ಗೌಡರ ಹೆಸರು ಸಹ ಸೇರ್ಪಡೆಯಾಗಿದೆ.ಈಗಾಗಲೇ ಬಿಜೆಪಿಯಿಂದ ಜಾತಿ ಸಮೀಕ್ಷೆ ಆಧಾರದ ಮೇಲೆ ಕೋಟ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಜಯಪ್ರಕಾಶ್ ಹೆಗ್ಡೆ ಬದಲಿಗೆ ಸದಾನಂದ ಗೌಡ ತನ್ನ ರಾಜಕೀಯ ನಿಷ್ಠೆ ಬದಲಾಯಿಸಿದ್ದರಿಂದ ಹೆಸರು ಪ್ರಸ್ತಾವಕ್ಕೆ ಕಾರಣವಾಗಿದೆ.ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಖಾಸಗಿ ಚಾನೆಲ್ ಮಾಡಿದ ಸಮೀಕ್ಷೆಯಲ್ಲಿ ಕೋಟ ಗೆಲುವಿನ ವಾತಾವರಣ ಸೃಷ್ಟಿಯಾಗಿದ್ದರಿಂದ ಕಾಂಗ್ರೆಸ್ ಈ ನಿರ್ಧಾರ ಕಾರಣ ಎನ್ನಲಾಗಿದೆ.
ಉಡುಪಿ–ಚಿಕ್ಕಮಗಳೂರು ಅಥವಾ ಮೈಸೂರು–ಕೊಡಗು ಕ್ಷೇತ್ರದಿಂದ ಈ ಹಿಂದೆ ಶೋಭಾ ಕರಂದ್ಲಾಜೆ ಎಂದು ತಿಳಿದ ಕಾಂಗ್ರೆಸ್, ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿ ಬಿಂಬಿಸಿದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸದಾನಂದ ಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಸದಾನಂದ ಗೌಡರು ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ಹೊಸಬರಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2011ರಲ್ಲಿ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶ ಬಂದಾಗ ರಾಜೀನಾಮೆ ನೀಡಿದ್ದರು.