ಮಾಹಿತಿ ತಂತ್ರಜ್ಞಾನ

ಉಡುಪಿ:ಲಂಡನಿನ ವೈದ್ಯ ಎಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ!

Views: 67

ಉಡುಪಿ: ತಾನು ಲಂಡನಿನ ವೈದ್ಯ ಎಂಬುದಾಗಿ ನಂಬಿಸಿ ಮಲ್ಪೆಯ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಕನಿಡಿಯೂರು ಗ್ರಾಮದ ವಿನೀತಾ(35) ಅವರು ಕಂಪನಿಯೊಂದರಲ್ಲಿ ಬಿಸಿನೆಸ್ ಪಾರ್ಟ್ನರ್ ಆಗಿ ಕೆಲಸ ಮಾಡಿಕೊಂಡು ಈ ನಡುವೆ ಜ. 24ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ಪರಿಚಯ ಮಾಡಿಕೊಂಡು ವಾಟ್ಸಾಪ್ ಮೂಲಕ ಚಾಟ್ ಮಾಡುತ್ತಿದ್ದ ನಂತರ ಆತನು ತಾನು ಲಂಡನ್ ನಿಂದ ಭಾರತಕ್ಕೆ ಬಂದಿರುವುದಾಗಿ ಹೇಳಿದ್ದರು. ಫೆಬ್ರವರಿ 16 ರಂದು ವಿನೀತಾ ಅವರಿಗೆ ಬೇರೆ ಒಂದು ನಂಬರಿನಿಂದ ಕರೆ ಬಂದಿದ್ದು ನಿಮ್ಮ ಸ್ನೇಹಿತ ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಕಷ್ಟದಲ್ಲಿದ್ದಾನೆ ಅವರನ್ನು ಬಿಡುಗಡೆ ಮಾಡಬೇಕಾದರೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ ಸರ್ಕಾರದಿಂದ ತಮ್ಮ ಮೇಲೆ ಕಾನೂನು ಕ್ರಮ ಆಗಬಹುದೆಂದು ಹೆದರಿಸಿ ವಿನೀತಾ ಅವರು ಹಣವನ್ನು ಪಾವತಿ ಮಾಡಿದರು. ಅವರು ಹೀಗೆ ಫೆಬ್ರವರಿ 16 ರಿಂದ 20ರವರೆಗೆ ಒಟ್ಟು 4,96,000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆ ಮತ್ತು ಫೋನ್ ಪೇ ಮೂಲಕ ಹಣ ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ

Related Articles

Back to top button