ಮಾಹಿತಿ ತಂತ್ರಜ್ಞಾನ
ಉಡುಪಿ: ಅಧಿಕ ಲಾಭಾಂಶದ ಆಮಿಷವೊಡ್ಡಿ ವಿದ್ಯಾರ್ಥಿಗೆ ಲಕ್ಷಾಂತರ ರೂಪಾಯಿ ವಂಚನೆ
Views: 100
ಉಡುಪಿ: ಅಧಿಕ ಲಾಭಾಂಶದ ಆಮಿಷವೊಡ್ಡಿ ವಿದ್ಯಾರ್ಥಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಆರ್ಕಿಟೆಕ್ಟ್ ಹಾಗೂ ಪ್ಲಾನಿಂಗ್ ವಿಭಾಗದಲ್ಲಿ ಕಲಿಯುತ್ತಿರುವ ಹರೀಶ್ ಹಣ ಕಳೆದುಕೊಂಡವರು.
ಅಕ್ಟೋಬರ್ 12ರಂದು ಅವರ ಮೊಬೈಲಿಗೆ ಆ್ಯಪ್ ಲಿಂಕ್ ಹಾಗೂ ಸಂದೇಶ ಕಳುಹಿಸಿ ಹಣವನ್ನು ದುಪ್ಪಟ್ಟು ಮಾಡುವ ಆಸೆ ತೋರಿಸಿದ್ದಾರೆ. ಅಪರಿಚಿತರು ಸುಮಾರು 3,85,599 ರೂಪಾಯಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ