ಇಬ್ಬಾಗವಾದ ಎನ್ ಸಿಪಿ; ಶಿಂಧೆ ಸರ್ಕಾರಕ್ಕೆ ಬೆಂಬಲಿಸಿ, ಉಪಮುಖ್ಯಮಂತ್ರಿಯಾದ ಅಜಿತ್ ಪವಾರ್

Views: 0
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಅವರು ಸ್ವ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ- ಶಿವಸೇನಾ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.
ಎನ್‌ಸಿಪಿ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಯಾಗಿ ಜುಲೈ 2 ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಮಧ್ಯೆ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರ ನಿವಾಸದಲ್ಲಿ ನಾಯಕರ ಸಭೆಯನ್ನು ಕರೆಯಲಾಗಿದ್ದು, ಹಲವು ನಾಯಕರೊಂದಿಗೆ ಚರ್ಚಿಸಿ, ಏಕನಾಥ ಶಿಂಧೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಒಟ್ಟು 53 ಶಾಸಕರ ಪೈಕಿ 43 ಮಂದಿ ಅಜಿತ್ ಪವಾರ್ ಪರವಾಗಿದ್ದಾರೆ ಎನ್ನಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ನಿಬಂಧನೆಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ಅಜಿತ್ ಪವಾರ್ ಗೆ 36 ಕ್ಕೂ ಹೆಚ್ಚು ಶಾಸಕರ ಬೆಂಬಲ ಬೇಕಾಗುತ್ತದೆ.
ಬಿಜೆಪಿಯ ದೇವೇಂದ್ರ ಪಡ್ನ ವಿಸ್ ಅವರೊಂದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಇತರ ಎನ್ ಸಿಪಿ ನಾಯಕರಲ್ಲಿ ಪ್ರಫುಲ್ ಪಾಟೀಲ್, ಧನಂಜಯ ಮುಂಡೆ, ಅನಿಲ್ ಪಾಟೀಲ್ ಮತ್ತು ಅದಿತಿ ತಕ್ಕರೆ ಸೇರಿದ್ದಾರೆ.
ಅಜಿತ್ ಪವಾರ್ ಅವರ ನಡೆಯು ಪವಾರ್ ಗೆ ದೊಡ್ಡ ಮಟ್ಟದ ಶಾಕ್ ನೀಡಿದೆ. ಎನ್‌ಸಿಪಿಯಲ್ಲಿನ ಒಡಕಿನಿಂದ 17 ವಿಪಕ್ಷಗಳ ಮೈತ್ರಿಕೂಟಕ್ಕೆ ಭಾರಿ ಹೊಡೆತ ಬಿದ್ದಿದೆ.