ರಾಜಕೀಯ

ಇಂದು ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋನಲ್ಲಿ ಅಮಿತ್ ಶಾ

Views: 0

ಇಂದು ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋನಲ್ಲಿ ಅಮಿತ್ ಶಾ

ಕುಂದಾಪುರ : ಬೈಂದೂರು ವಿಧಾನ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಅಪರಾಹ್ನ ಬೃಹತ್ ರೋಡ್ ಶೋ ನಡೆಸಿ. ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟಿಹೊಳೆ ಪರ ಮತಯಾಚಿಸಿದರು

ಸುರಕ್ಷಿತ  ಕರಾವಳಿ,  ಕನಾ೯ಟಕದ ಸಮೃದ್ಧಿ ಬಿಜೆಪಿ  ಸರಕಾರದಿಂದ  ಮಾತ್ರ  ಸಾಧ್ಯ. ರಾಜ್ಯದಲ್ಲಿ  ಬಿಜೆಪಿ  ಗೆಲ್ಲಿಸಿದರೆ ಮೋದಿ  ದೇಶದಲ್ಲಿ  ಮತ್ತೊಮ್ಮೆ  ಪ್ರಧಾನಿಯಾಗುತ್ತಾರೆ.  ಬಿಜೆಪಿಯನ್ನು ಗೆಲ್ಲಿಸಿದರೆ ಮೋದಿ  ನೇತೃತ್ವದಲ್ಲಿ  ನಾವು ಡಬಲ್  ಎಂಜಿನ್ ಸರಕಾರವನ್ನು  ರಚಿಸಿ ಕನಾ೯ಟಕವನ್ನು ಸುಭದ್ರವಾಗಿಡುತ್ತೇವೆ.

50 ಸಾವಿರ  ಮತಗಳಿಂದ ಬೈಂದೂರು  ಕ್ಷೇತ್ರದ  ಅಭ್ಯಥಿ೯ಯನ್ನು ಗೆಲ್ಲಿಸಿದರೆ ಮತ್ತೆ  ಖಂಡಿತ  ಬರುತ್ತೇನೆ  ಎಂದರು.

ರೋಡ್  ಶೋನಲ್ಲಿ ಹಾದಿಯುದ್ದಕ್ಕೂ ಅಪಾರ  ಸಂಖ್ಯೆಯಲ್ಲಿ  ನೆರೆದಿದ್ದ ಜನ ಹೂವಿನ  ಮಳೆ  ಸುರಿಸಿ  ಸ್ವಾಗತಿಸಿದರು.

ರೋಡ್ ಶೋ ನಡೆಯುವ  ಸುಮಾರು 500 ಮೀ ಸುತ್ತಲೂ ಬ್ಯಾರಿಕೇಡ್ ಗಳನ್ನು  ಅಳವಡಿಸಲಾಗಿತ್ತು. ಅಮಿತ್ ಶಾ ಅವರೇ ಬ್ಯಾರಿಕೇಡ್ ತೆಗೆಯಲು ಸೂಚಿಸಿದಾದ ಜನರು ಹತ್ತಿರಕ್ಕೆ ಬಂದರು

ಸಚಿವ ಕೋಟ  ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ತಿನ ಸದಸ್ಯರಾದ ಪ್ರತಾಪ್ ಸಿಂಹ  ನಾಯಕ್, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್  ನಾಯಕ್, ಬೈಂದೂರು ಉಸ್ತುವಾರಿ ಬೃಜೇಶ್  ಚೌಟ,  ದೀಪಕ್ ಕುಮಾರ್  ಶೆಟ್ಟಿ, ಪ್ರಧಾನ ಕಾಯ೯ದಶಿ೯ ಪ್ರಿಯದಶಿ೯ನಿ ಇನ್ನಿತರರು ಉಪಸ್ಥಿತರಿದ್ದರು.

 

Related Articles

Back to top button