ಜನಮನ

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: 2000 ಮಂದಿ ಸಾವು

Views: 0

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿ 2,000 ಮಂದಿ ಮೃತಪಟ್ಟಿದ್ದು, ನೆಲಸಮವಾದ ಹಳ್ಳಿಗಳ ಅವಶೇಷಗಳ ನಡುವೆ ಬದುಕುಳಿದವರ ರಕ್ಷಣೆಗೆ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದೆ.

ಶನಿವಾರ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಬಳಿಕ 8 ಬಾರಿ ಭೂಕಂಪನ ಸಂಭವಿಸಿದೆ. ಪ್ರಾಂತೀಯ ರಾಜಧಾನಿ ಹೆರಾತ್‌ನ ವಾಯುವ್ಯಕ್ಕೆ 30 ಕಿಮೀ ದೂರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆಗಳು ನೆಲಕ್ಕೆ ಉರುಳಿದೆ.

ಘಟನೆಯಲ್ಲಿ ಸಾವುನೋವುಗಳು ತುಂಬಾ ಹೆಚ್ಚಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಅವರು ಹೇಳಿದ್ದಾರೆ.

ಜಿಂದಾ ಜಾನ್‌ ಜಿಲ್ಲೆಯ ಸರ್ಬೋಲ್ಯಾಂಡ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದುವಾಗಿದ್ದು, ಅಲ್ಲಿ ಹತ್ತಾರು ಮನೆಗಳು ನೆಲಸಮವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಹೆರಾತ್ ಪ್ರಾಂತ್ಯದ ಕನಿಷ್ಠ 12 ಹಳ್ಳಿಗಳಲ್ಲಿ 600 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಸುಮಾರು 4,200 ಜನರು ಭೂಕಂಪಕ್ಕೆ ಸಿಲುಕಿದ್ದಾರೆ ಎಂದು ಹೇಳಿದೆ.

ಭೂಕಂಪನದ ಬಗ್ಗೆ ಅನುಭವವನ್ನು ಹಂಚಿಕೊಂಡ 42 ವರ್ಷದ ಬಶೀರ್ ಅಹ್ಮದ್, ಮೊದಲ ಬಾರಿ ಸಂಭವಿಸಿದ ಭೂಮಿಯ ನಡುಕದಲ್ಲಿ ಎಲ್ಲಾ ಮನೆಗಳು ಕುಸಿದಿವೆ. ಮನೆಯೊಳಗಿದ್ದವರು ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ಹೇಳಿದ್ದಾರೆ.

Related Articles

Back to top button