ಇತರೆ
ವಿವಾಹಿತೆ ಮಹಿಳೆ ಪತ್ರ ಬರೆದಿಟ್ಟು ಇಬ್ಬರು ಪುಟ್ಟ ಮಕ್ಕಳೊಂದಿಗೆ ನಾಪತ್ತೆ
Views: 48
ಕನ್ನಡ ಕರಾವಳಿ ಸುದ್ದಿ: ವಿವಾಹಿತೆ ಮಹಿಳೆಯೋರ್ವರು ಮನೆಯ ಟೇಬಲ್ ಮೇಲೆ ಪತ್ರ ಬರೆದಿಟ್ಟು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಾಣೆಯಾದ ಘಟನೆ ಫೆ. 26 ರಂದು ಶಿರ್ವದಲ್ಲಿ ನಡೆದಿದೆ.
ಸೈಂಟ್ ಮೇರಿ ಸರ್ಕಲ್ ಬಳಿಯ ಕೆನರಾ ಬ್ಯಾಂಕ್ ಹಿಂದುಗಡೆಯ ಬಾಡಿಗೆ ಮನೆ ನಿವಾಸಿ ಪೂರ್ಣಿಮಾ (24) ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಮಹಿಳೆ. ಅನ್ವಿಕಾ(3.5) ಹಾಗೂ ತನ್ವಿಕಾ(2) ಅಪ್ರಾಪ್ತ ಮಕ್ಕಳು.
ಈಕೆಗೆ ಸುಮಾರು 4 ವರ್ಷಗಳ ಹಿಂದೆ ಮಣಿಕಂಠ ಎಂಬವರೊಂದಿಗೆ ಮದುವೆಯಾಗಿದ್ದು, ಸಂಸಾರದಲ್ಲಿ ಕಲಹ ಉಂಟಾಗಿ ತಾಯಿ ಮನೆಯಲ್ಲಿ ತನ್ನ ಮಕ್ಕಳಾದ ಅನ್ವಿಕಾ(3.5) ಹಾಗೂ ತನ್ವಿಕಾ(2) ರವರೊಂದಿಗೆ ವಾಸವಾಗಿದ್ದರು.
ಫೆ. 26 ರಂದು ಮಧ್ಯಾಹ್ನ 3 ಗಂಟೆಯ ಬಳಿಕ ಮನೆಯಲ್ಲಿ ಟೇಬಲ್ ಮೇಲೆ ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗುವ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ ಹೊರಟು ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಅವರ ತಾಯಿ ದೇವಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






