ಶಿಕ್ಷಣ

ಅದೆಷ್ಟೋ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಪ್ರೊಫೆಸರ್‌ ಅರೆಸ್ಟ್‌

Views: 266

ಕನ್ನಡ ಕರಾವಳಿ ಸುದ್ದಿ: ಅದೆಷ್ಟೋ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಎಸಗಿ ಅದನ್ನು ರೆಕಾರ್ಡ್‌ ಮಾಡಿ ಬೆದರಿಕೆವೊಡ್ಡುತ್ತಿದ್ದ 50ವರ್ಷದ ಪ್ರೊಫೆಸರ್‌ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರೊಫೆಸರ್‌ ಅರೆಸ್ಟ್‌ ಆಗಿದ್ದಾನೆ.

ಹತ್ರಾಸ್‌ನ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಪ್ರಾಧ್ಯಾಪಕ ರಜನೀಶ್ ಕುಮಾರನ್ನು ಹೆಡೆಮುರಿ ಕಟ್ಟುವಲ್ಲಿ ಯುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನ ಬಳಿಯಿಂದ 59ಕ್ಕೂ ಹೆಚ್ಚಿನ ವಿಡಿಯೊಗಳಿದ್ದ ಯುಎಸ್‌ಬಿ ಫ್ಲ್ಯಾಷ್ ಅಥವಾ ಪೆನ್ ಡ್ರೈವ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಮಾರ್ ಈ ಹಿಂದೆ 1996 ರಲ್ಲಿ ವಿವಾಹವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆ ಮದುವೆಯ ಸ್ಥಿತಿ ಸ್ಪಷ್ಟವಾಗಿಲ್ಲ. ಆದಾಗ್ಯೂ, ದಂಪತಿಗೆ ಮಕ್ಕಳಿರಲಿಲ್ಲ. 2001 ರಲ್ಲಿ ಆತನನ್ನು ಬಾಗ್ಲಾ ಕಾಲೇಜಿನಲ್ಲಿ ಶಿಕ್ಷಕನನ್ನಾಗಿ ನೇಮಿಸಲಾಯಿತು. ಕಳೆದ ವರ್ಷ ಅವರನ್ನು  ಬಡ್ತಿ ನೀಡಲಾಯಿತು. 2008ರ ನಂತರ ಈ ನೀಚ ಕೃತ್ಯವನ್ನು ಆರಂಭಿಸಿದ್ದಾನೆ. ಅದೆಷ್ಟೋ ವಿದ್ಯಾರ್ಥಿನಿಯರ ಬದುಕಿನಲ್ಲಿ ಆಟ ಆಡಿ, ಆ ಹೀನ ಕೃತ್ಯವನ್ನು ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದ. ಈಗಾಗಲೇ ಈತ ಚಿತ್ರೀಕರಿಸಿರುವ 65 ಕ್ಕೂ ಹೆಚ್ಚು ವೀಡಿಯೊಗಳಲ್ಲಿ ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿವೆ ಎಂಬ ಭಯಾನಕ ಸಂಗತಿಯನ್ನು ಪೊಲೀಸರು ಬಾಯ್ಬಿಟ್ಟಿದ್ದಾರೆ.

 

Related Articles

Back to top button