ಇತರೆ
ಅತ್ಯಾಚಾರಿ ಆರೋಪಿ ಪರಾರಿಯಾಗಲು ಯತ್ನ: ಗುಂಡಿಕ್ಕಿ ಬಂಧನ

Views: 272
ಕನ್ನಡ ಕರಾವಳಿ ಸುದ್ದಿ: ಐದು ವರ್ಷದ ಮಗುವಿನ ಮೇಲೆ ಸೋಮವಾರ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆ ಕಮಲಾಪುರದ ಮಂಜುನಾಥ್ (26)ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.
ಕೊಪ್ಪಳದ ಹುಲಗಿಯಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಬಂಧನದ ಬಳಿಕ ಇಂದು ಬೆಳಿಗ್ಗೆ ಪಂಚಾನಾಮೆಗೆ ಹೋದಾಗ ತೋರಣಗಲ್ಲು ಠಾಣೆಯ ಹೆಡ್ ಕಾನ್ಸಟೇಬಲ್ ರಘುಪತಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಆಗ ಆತನ ಮೇಲೆ ಪಿಎಸ್ ಐ ಡಾಕೇಶ್ ಆರೋಪಿಯ ಬಲಗಾಲಿಗೆ ಫೈರಿಂಗ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಳ್ಳಾರಿಯಲ್ಲಿನ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆಂದು ಎಸ್ಪಿ ಶೋಭಾರಾಣಿ ಹೇಳಿದ್ದಾರೆ.