Bigg Bossಗೆ ಇವರೇನಾ ಸ್ಪರ್ಧಿಗಳು? ಸೋಷಿಯಲ್ ಮೀಡಿಯಾದಲ್ಲಿ ಪಟ್ಟಿ ವೈರಲ್

Views: 42
ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ಗೆ ದಿನಗಣನೆ ಶುರುವಾಗಿದೆ.
ಈಗಾಗಲೇ ತೆಲುಗಿನ ಬಿಗ್ ಬಾಸ್ಗೆ ಚಾಲನೆ ಸಿಕ್ಕಿರುವ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಸೀಸನ್ 10ರ ಕಾರ್ಯಕ್ರಮದಲ್ಲಿ ಇವರೆಲ್ಲಾ ಸ್ಪರ್ಧಿಸುತ್ತಾರಾ?
ಬಿಗ್ ಬಾಸ್ 10ನೇ ಸೀಸನ್ ಆಗಿರುವ ಕಾರಣ ಒಟಿಟಿ ಇಲ್ಲದೇ ಟಿವಿ ಬಿಗ್ ಬಾಸ್ ಶುರು ಮಾಡಲು ವಾಹಿನಿ ನಿರ್ಧರಿಸಿದೆ. ದೊಡ್ಮನೆ ಆಟಕ್ಕೆ ತೆರೆಮರೆಯಲ್ಲಿ ಎಲ್ಲಾ ತಯಾರಿ ಕೂಡ ನಡೆಯುತ್ತಿದೆ. ಹಾಗಾದ್ರೆ ಯಾರೆಲ್ಲಾ ಸ್ಟಾರ್ಗಳ ಹೆಸರು ಸದ್ದು ಮಾಡ್ತಿದೆ. ಇಲ್ಲಿದೆ ಮಾಹಿತಿ
ಟಿವಿ ಲೋಕದ ಸ್ಟಾರ್ ನಟಿ ಮೇಘಾ ಶೆಟ್ಟ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಈಗಾಗಲೇ ‘ದಿಲ್ ಪಸಂದ್’ ಮತ್ತು ‘ತ್ರಿಬಲ್ ರೈಡಿಂಗ್’ ಚಿತ್ರಗಳು ರಿಲೀಸ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೇಘಾ ಕೂಡ ದೊಡ್ಮನೆಗೆ ಬರುತ್ತಾರೆ ಎಂದು ಚರ್ಚೆಯಾಗುತ್ತಿದೆ.
ಸುನೀಲ್ ರಾವ್ ಎಂದಾಕ್ಷಣ ಮೊದಲು ನೆನಪಾಗೋದು ರಮ್ಯಾ ಅಜಯ್ ರಾವ್ ಜೊತೆಗಿನ ಎಕ್ಸ್ಕ್ಯೂಸ್ ಮಿ ಸಿನಿಮಾ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರು ಚಿತ್ರರಂಗದಲ್ಲಿ ನಾಯಕನಾಗಿ ನಿಲ್ಲಲು ಸುನೀಲ್ ರಾವ್ಗೆ ಅದೃಷ್ಟ ಒಲಿಯಲಿಲ್ಲ. ಈಗ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸುತ್ತಾ, ಉದ್ಯಮಿಯಾಗಿ ಸುನೀಲ್ ಗುರುತಿಸಿಕೊಳ್ತಿದ್ದಾರೆ.
ಇಬ್ಬರ ಹೆಸರು ಕೂಡ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ನಮ್ರತಾ, ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ ಕಲಾವಿದೆ. ಕಿರುತೆರೆಯಲ್ಲಿ ಸಿಕ್ಕ ಬ್ರೇಕ್, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ಸಿಗಲಿಲ್ಲ. ಇನ್ನೂ ನಟನೆ ಮತ್ತು ಗಾಯನದ ಮೂಲಕ ನಿನಾದ್ ಗಮನ ಸೆಳೆದಿದ್ದಾರೆ.
ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅವರು ‘ಗುರು ಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು. ಈಗ ದೊಡ್ಮನೆಗೆ ಕಾಲಿಡುತ್ತಾರೆ ಎಂದು ರಕ್ಷಕ್ ಸುದ್ದಿಯಲ್ಲಿದ್ದಾರೆ.
ಪ್ರತಿ ಸೀಸನ್ನಲ್ಲೂ ಸಿಂಗರ್ಗಳಿಗೆ ಬಿಗ್ ಬಾಸ್ ಟೀಂ ಗಾಳ ಹಾಕುತ್ತಾರೆ. ಅದರಂತೆ ಈ ಬಾರಿ ರ್ಯಾಪರ್-ಸಿಂಗರ್ ಇಶಾನಿ ಕೂಡ ಬರುತ್ತಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬರಲಿಲ್ಲ. ಈ ಬಾರಿ ಕೂಡ ದೊಡ್ಮನೆಗೆ ಬರುವ ಅವಕಾಶ ಸಿಕ್ಕಿದೆ. ಒಪ್ಪಿ ಮನೆಗೆ ಬರುತ್ತಾರಾ ಕಾಯಬೇಕಿದೆ.
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಧನುಶ್ರೀ, ಸೋನು ಗೌಡಗೆ ಕಳೆದ ಬಾರಿ ಅವಕಾಶ ನೀಡಿದ್ದರು. ಈ ಬಾರಿ ಶಿಲ್ಪಾ ಗೌಡ ಭೂಮಿಕಾ ಬಸವರಾಜ್ ಬಿಂದು ಗೌಡ ಬರಲಿದ್ದಾರೆ ಎನ್ನಲಾಗುತ್ತಿದೆ. ಶೋ ಶುರುವಾಗುವ ಸಮಯದಲ್ಲಿ ಅಧಿಕೃತ ಮಾಹಿತಿ ಸಿಗಲಿದೆ.
ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಸಮ್ಥಿಂಗ್ ಸ್ಪೆಷಲ್ ಆಗಿ ಈ ಸೀಸನ್ ಇರಲಿದೆ ಎಂಬುದನ್ನ ವಾಹಿನಿ ತಿಳಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಆಟ ಶುರುವಾಗಲಿದೆ. ಅಷ್ಟರ ಒಳಗೆ ನಟ ಕಮ್ ನಿರೂಪಕ ಸುದೀಪ್, ಈಗಾಗಲೇ ಒಪ್ಪಿರುವ ಸಿನಿಮಾಗಳ ಕೆಲಸ ಮುಗಿಸಬೇಕಿದೆ.
ಡ್ರೋನ್ ಪ್ರತಾಪ್, ನಮ್ರತಾ ಗೌಡ, ಬಿಗ್ ಬಾಸ್ ಸೀಸನ್ 10, ಭೂಮಿಕಾ ಬಸವರಾಜ್, ಮೇಘಾ ಶೆಟ್ಟಿ, ರಕ್ಷಕ್ ಬುಲೆಟ್, ಸುನೀಲ್ ರಾವ್






