ಬಹುಕಾಲದ ಗೆಳತಿಯನ್ನು ಕೈ ಹಿಡಿದು ಹೊಸ ಜೀವನ ಆರಂಭಿಸಿದ ವಾಸುಕಿ ವೈಭವ್

Views: 5
ಸ್ಯಾಂಡಲ್ವುಡ್ನ ಯಂಗ್ ಅಂಡ್ ಟ್ಯಾಲೆಂಟೆಡ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ರಿಸೆಂಟ್ ಆಗಿ ವಾಸುಕಿ ಮದುವೆ ಬಗ್ಗೆ ಹಿರಿಯ ನಟಿ ತಾರಾ ಸುಳಿವು ಕೊಟ್ಟಿದ್ದರು. ಆದ್ರೆ ವಾಸುಕಿ ಕೈ ಹಿಡಿಯಲಿರುವ ಹುಡುಗಿ ಯಾರು? ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅಂತ ಗೊತ್ತಾಗಿರಲಿಲ್ಲ.

ಇದೀಗ ಗುರು-ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಜೀವನದ ಮತ್ತೊಂದು ಹಂತ ಪ್ರವೇಶಿಸಿದ್ದಾರೆ. ತುಂಬಾ ದಿನದಿಂದ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಮದುವೆ ಸುದ್ದಿ ಸದ್ದು ಮಾಡ್ತಿತ್ತು. ವಾಸುಕಿ ಮದುವೆ ಫಿಕ್ಸ್ ಆಗಿದೆ. ಶೀಘ್ರದಲ್ಲೇ ಮದುವೆನೂ ಆಗ್ತಾರೆ ಎನ್ನಲಾಗಿತ್ತು. ಆದ್ರೆ ಯಾವತ್ತೂ, ಎಲ್ಲಿ ಅನ್ನೋ ಯಾವ ವಿಚಾರವನ್ನ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಸರ್ಪ್ರೈಸ್ ಎನ್ನುವ ರೀತಿ ವಾಸುಕಿ ಮದುವೆ ಸಂಪ್ರದಾಯವಾಗಿ ನೆರೆವೇರಿದ್ದು, ಫೋಟೋ ವಿಡಿಯೋಗಳು ವೈರಲ್ ಆಗಿವೆ.

ವಾಸುಕಿ ವೈಭವ್ ಮದುವೆ ಅಂದಾಕ್ಷಣ ವಧು ಯಾರು ಅನ್ನೋದು ಬಹಳಷ್ಟು ಕುತೂಹಲ ಕೆರಳಿಸಿತ್ತು. ಸಿನಿಮಾ ನಟಿ ಇರಬಹುದಾ? ಬಿಗ್ಬಾಸ್ ಸಹ ಸ್ಪರ್ಧಿ ಇರಬಹುದಾ ಅನ್ನೋ ಕನ್ಫ್ಯೂಶನ್ ಕಾಡಿತ್ತು. ಆದರೆ ಬಹುಕಾಲದ ಗೆಳತಿಯ ಜೊತೆ ಸಪ್ತಪದಿ ತುಳಿದಿರುವ ವಾಸುಕಿ ತಮ್ಮ ಪ್ರೀತಿಯನ್ನ ಉಳಿಸಿಕೊಂಡಿದ್ದಾರೆ. ಹೌದು, ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ವಾಸುಕಿ ವೈಭವ್ ಕಲ್ಯಾಣ ಜರುಗಿದೆ. ತುಂಬಾ ವರ್ಷದಿಂದ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಈ ಸ್ನೇಹ ಪ್ರೀತಿಗೆ ತಿರುಗಿ ಎರಡೂ ಕುಟುಂಬದವನ್ನು ಒಪ್ಪಿಸಿ ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಹಿರಿಯ ನಟ ಸಿಹಿ ಕಹಿ ಚಂದ್ರು ಈ ಮದುವೆಯಲ್ಲಿ ಭಾಗಿಯಾಗಿದ್ದು, ನವಜೋಡಿಯ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಸತೀಶ್ ನೀನಾಸಂ, ಡಾಲಿ ಧನಂಜಯ್, ಅಮೃತಾ ಅಯ್ಯಂಗರ್, ಶ್ರುತಿ ಹರಿಹರನ್, ಕೃಷಿ ತಾಪಂಡ, ಸಪ್ತಮಿ ಗೌಡ ಸಹ ವಾಸುಕಿ ಮದುವೆಯಲ್ಲಿ ಭಾಗವಹಿಸಿ ನವಜೋಡಿಗೆ ವಿಶ್ ಮಾಡಿದ್ದಾರೆ.
ವಾಸುಕಿ ಮನೆಯ ಒಡತಿಯಾಗಿರುವ ವಾಸುಕಿ ಮೂಲತಃ ರಂಗಭೂಮಿ ಕಲಾವಿದೆ ಅಂತ ಗೊತ್ತಾಗಿದೆ. ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಹಲವಾರು ಸ್ಟೇಜ್ಗಳಲ್ಲಿ ಶೋ ಪರ್ಫಾಮ್ ಮಾಡಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಕೆಲಸ ಮಾಡ್ತಿದ್ದಾರಂತೆ. ಅಂದ್ಹಾಗೆ, ವಾಸುಕಿ ಮತ್ತು ಬೃಂದಾ ಪರಿಚಯ ಬೆಳೆದಿದ್ದು ಸಹ ಇದೇ ರಂಗಭೂಮಿಯಲ್ಲಿ. ವಾಸುಕಿ ವೈಭವ್ ತಮ್ಮ ಜರ್ನಿ ಆರಂಭಿಸಿದ್ದೇ ರಂಗಭೂಮಿಯಲ್ಲಿ. ಬೃಂದಾ ಜೊತೆ ವಾಸುಕಿ ಸಹ ಹಲವು ನಾಟಕಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಬೃಂದಾ ನಟಿಸಿರುವ ನಾಟಕಗಳಿಗೆ ಮ್ಯೂಸಿಕ್ ಸಹ ಕೊಟ್ಟಿದ್ದಾರೆ. ಆಗಿಂದಲೂ ಇಬ್ಬರು ನಡುವೆ ಒಳ್ಳೆಯ ಒಡನಾಟ ಬೆಳೆದಿದ್ದು, ಅದು ಮದುವೆವರೆಗೂ ತಂದು ನಿಲ್ಲಿಸಿದೆ.







