ಕರಾವಳಿ

ಒಂದೇ ಕುಟುಂಬದ ನಾಲ್ವರ ಹತ್ಯೆ: ಪ್ರವೀಣ್‌ ಚೌಗಲೆ ಮತ್ತಷ್ಟು ಸ್ಫೋಟಕ ಮಾಹಿತಿ!

Views: 0

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಪ್ರವೀಣ್‌ ಚೌಗಲೆ ಕುರಿತ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿದೆ. ಸಿಸಿಟಿವಿ ಕೊಟ್ಟ ಸುಳಿವಿನಿಂದ ಉಡುಪಿ ಪೊಲೀಸರು ಆರೋಪಿಯನ್ನ ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ. ಇದೀಗ ಖಾಕಿ ಪಡೆಯ ವಿಚಾರಣೆಯಲ್ಲಿ ಈತನ ಕೇರ್‌ ಆಫ್‌ ಅಡ್ರೆಸ್‌ ಮಂಗಳೂರಾಗಿತ್ತು ಅನ್ನೋ ಅಂಶ ಗೊತ್ತಾಗಿದೆ.

ಉಡುಪಿಯ ಅಯ್ನಾಯ್‌ ಹಾಗೂ ಆರೋಪಿ ಪ್ರವೀಣ್ ಏರ್ ಇಂಡಿಯಾ ವಿಮಾನದಲ್ಲಿ ಸಹೋದ್ಯೋಗಿಗಳಾಗಿದ್ದರು. ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಯ್‌ಗೂ ಕ್ಯಾಬಿನ್ ಕ್ರ್ಯೂ ಆಗಿದ್ದ ಪ್ರವೀಣ್‌ಗೂ ಪರಿಚಯವಿತ್ತು. ಒಂದೇ ಸಂಸ್ಥೆಯಲ್ಲಿ ಅಯ್ನಾಝ್ ಹಾಗೂ ಪ್ರವೀಣ್‌ ಜೊತೆಯಾಗಿ ಕೆಲಸ ಮಾಡುತ್ತಿದ್ದು ಇದೀಗ ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ.

ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಝ್‌ಗೆ ವಿಮಾನದಲ್ಲಿ ಸುರಕ್ಷತಾ ನಿಯಮ ಹೇಳಿಕೊಡ್ತಿದ್ದವನೇ ಕಂಟಕವಾಗಿದ್ದಾನೆ. ಏರ್ ಇಂಡಿಯಾದ ಉದ್ಯೋಗಿಯಾಗಿದ್ದ ಆರೋಪಿ ಪ್ರವೀಣ್, ವಿಮಾನದಲ್ಲಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಹಾಗೂ ಇನ್ನಿತರ ಸುರಕ್ಷತೆ ನಿಯಮ ಹೇಳಿಕೊಡುತ್ತಿದ್ದ. ಕೊನೆಗೆ ಅಯ್ನಾಝ್ ಮೇಲಿದ್ದ ಮೋಹ ದ್ವೇಷಕ್ಕೆ ತಿರುಗಿ ಪ್ರವೀಣ್ ಹತ್ಯೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

Related Articles

Back to top button