ಜನಮನ

ಚಿಂತಾಮಣಿಯಲ್ಲಿ ಅಪಹರಣವಾಗಿದ್ದ ಮಗು ಹುಬ್ಬಳ್ಳಿಯಲ್ಲಿ ಪತ್ತೆ

Views: 0

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾದಲ್ಲಿ ಭಾನುವಾರ ಅಪಹರಣವಾಗಿದ್ದ ಎರಡು ವರ್ಷದ ಗಂಡು ಮಗು ಜಾವಿದ್ ಮಂಗಳವಾರ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರಿನ ಪಾದರಾಯನಪುರದ ಜಬೀವುಲ್ಲಾ, ಅವರ ಮಾವ ದಸ್ತು, ಅತ್ತೆ ಆಯಿಷಾ ಹಾಗೂ ಸಂಬಂಧಿಕರು ದರ್ಗಾಗೆ ಭೇಟಿ ನೀಡಿದ್ದರು. ಆ ವೇಳೆ ಮಗು ಕಾಣೆಯಾಗಿತ್ತು. ದರ್ಗಾದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳವಾರ ಮಧ್ಯಾಹ್ನ ಮಗು ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಮಗು ಸಿಕ್ಕಿರುವ ಕುರಿತು ಮಾಹಿತಿ ಹಂಚಿಕೊಳ್ಳಲಾಗಿತ್ತು. ‌

ಆಗ ಪೊಲೀಸರ ತಂಡ ಹಾಗೂ ಮಗುವಿನ ತಂದೆ-ತಾಯಿ ಹುಬ್ಬಳ್ಳಿಗೆ ದೌಡಾಯಿಸಿದ್ದಾರೆ. ಮಗು ಎಲ್ಲಿ ಪತ್ತೆಯಾಗಿದೆ. ಮಗುವನ್ನು ಎತ್ತಿಕೊಂಡು ಹೋದ ಅಪರಿಚಿತ ಯಾರು? ಅಲ್ಲಿ ಏಕೆ ಬಿಟ್ಟು ಹೋದ ಎಂಬ ಬಗ್ಗೆ ಇನ್ನೂ ಯಾವ ಮಾಹಿತಿ ಲಭ್ಯವಾಗಿಲ್ಲ. ಹುಬ್ಬಳ್ಳಿಗೆ ತೆರಳಿರುವ ಪೊಲೀಸರ ತಂಡ ಬಂದ ಬಳಿಕ ಎಲ್ಲಾ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!