ಜನಮನ

ಸಾಧನಾ ಮರವಂತೆ: ಜನರ ಪ್ರೀತಿ ಗಳಿಸಿರುವ ಮೆಸ್ಕಾಂ ಲೈನ್ ಮೆನ್ ರವರಿಗೆ ಸನ್ಮಾನ 

Views: 0

ಮರವಂತೆ : ಮರವಂತೆ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆದಾರರಿಗೆ ನಿಸ್ಪ್ರಹ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿ ಗಳಿಸಿರುವ ಮೆಸ್ಕಾಂ ಲೈನ್ ಮೆನ್ ಗಳಾದ ಮಂಜುನಾಥ ದೇವಾಡಿಗ ಮತ್ತು ಅಲಗೌಡ ಪಾಟೀಲ ರನ್ನು ಶನಿವಾರ ಸಾಧನಾ ಸಮುದಾಯ ಭವನದಲ್ಲಿ ನಡೆದ ಸಾಧನಾ ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು.

ಸಾಧನಾ ಅಧ್ಯಕ್ಷ ಜೇಕ್ಸನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನೆಯ ನುಡಿಗಳನ್ನಾಡಿದ ಸದಸ್ಯ ನಾಗೇಶ್ ಎಸ್. ರಾವ್ ಉಭಯ ಲೈನ್ ಮನ್ನರ ಕರ್ತವ್ಯ ನಿಷ್ಠೆ, ಸೇವಾ ಮನೋಭಾವನೆಯನ್ನು ಶ್ಲಾಘಿಸಿದರು. ಕೋಶಾಧಿಕಾರಿ ಎಂ. ಸುಬ್ರಹ್ಮಣ್ಯ ಅವಭೃತ ಸ್ವಾಗತಿಸಿದರು. ಕಾರ್ಯದರ್ಶಿ ಗಜೇಂದ್ರ ಖಾರ್ವಿ ವಂದಿಸಿದರು. ದೇವಿದಾಸ ಶ್ಯಾನುಭಾಗ್ ನಿರೂಪಿಸಿದರು.

Related Articles

Back to top button
error: Content is protected !!