ಮರವಂತೆ ಸಾಧನಾ ವೇದಿಕೆ :’50ನೇ ನಾಡಹಬ್ಬ ನುಡಿ ಹಬ್ಬ’ ಕಾರ್ಯಕ್ರಮ

Views: 0
ಕುಂದಾಪುರ: ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣವಾದ ಐವತ್ತನೆ ವರ್ಷಾಚರಣೆಯ ವಿಶೇಷ ಅವಸರದಲ್ಲಿ ನವೆಂಬರ್ ಒಂದರಂದು ಮರವಂತೆಯ ಸಾಧನಾ ವೇದಿಕೆ ‘ನಾಡಹಬ್ಬ ನುಡಿ ಹಬ್ಬ’ ಕಾರ್ಯಕ್ರಮ ಆಯೋಜಿಸಿತ್ತು.

ಸಾಧನಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಕ್ಷ ಜೇಕ್ಸನ್ ಡಿಸೋಜ ಮತ್ತು ಕಾರ್ಯದರ್ಶಿ ಗಜೇಂದ್ರ ಖಾರ್ವಿ ಉದ್ಘಾಟಿಸುತ್ತಿದ್ದಂತೆ ಹದಿನಾಲ್ಕು ಹಾಡುಗಾರರು ಹಚ್ಚೇವು ಕನ್ನಡದ ದೀಪ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು. ಆ ಬಳಿಕ ಎರಡು ಗಂಟೆಗಳ ಕಾಲ ಅನಿತಾ ಆರ್. ಕೆ, ಕೇದಾರ ಮರವಂತೆ, ಛಾಯಾದೇವಿ, ದೀಕ್ಷಿತಾ ಖಾರ್ವಿ, ಧನ್ಯತ್ ಖಾರ್ವಿ, ಧನ್ಯತಾ ಶ್ಯಾನುಭಾಗ್, ಶ್ರೀವರ್ಷಾ, ಸಮನ್ವಿ, ಸುನಿತಾ, ಹರೀಶ್ ಗೌಡ, ಯೋಗಿನಿ ಆಚಾರ್ಯ, ಪ್ರಸನ್ನ ಹೆಗ್ಡೆ, ವಿನಯಾ ಶ್ಯಾನುಭಾಗ್, ಲೋಲಾಕ್ಷಿ ಖಾರ್ವಿ ಕನ್ನಡ ಗೀತೆಗಳನ್ನು ಹಾಡಿದರು. ವಿನಾಯಕ ಪ್ರಭು ಹಾರ್ಮೋನಿಯಂ, ರಮೇಶ್ ಭಟ್ ಮತ್ತು ನಾಗರಾಜ ಪೈ ತಬಲಾ ಸಾಥ್ ನೀಡಿದರು. ಜತೀಂದ್ರ ಮರವಂತೆ ಸ್ವಾಗತಿಸಿ ದೇವಿದಾಸ ಶ್ಯಾನುಭಾಗ್ ವಂದಿಸಿದರು. ಎಂ. ಸುಬ್ರಹ್ಮಣ್ಯ ಅವಭೃತ ನಿರೂಪಿಸಿದರು.






