ಸಾಂಸ್ಕೃತಿಕ
ಕುಂದಾಪುರದಲ್ಲಿ ಹುಲಿಗಳು ಸಾರ್… ಹುಲಿಗಳು..!?

Views: 0
ಕುಂದಾಪುರ: ರೋಟರಿ ಕ್ಲಬ್ ಜೆಸಿಐ ಕುಂದಾಪುರ ಸಿಟಿ, ಕಿಯೋನಿಕ್ಸ್ ಇವರ ಸಹಯೋಗದೊಂದಿಗೆ ಕುಂದಾಪುರ ಭಂಡಾರ್ಕರ್ಸ್ ಕಾಲೇಜು ಕ್ಯಾಂಪಸ್ ನಲ್ಲಿ ಹುಲಿ ಕುಣಿತವನ್ನು ಏರ್ಪಡಿಸಲಾಗಿತ್ತು.
ಕಾಲೇಜು ವಿಶ್ವಸ್ಥ ಮಂಡಳಿಯ ಶಾಂತರಾಮ ಪ್ರಭು ಹುಲಿಕುಣಿತಕ್ಕೆ ಚಾಲನೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ ಮಾತನಾಡಿ, ನಮ್ಮ ಕರಾವಳಿಯ ದೇವಿ ಆರಾಧನೆಯಲ್ಲಿ ದೇವಿಯ ವಾಹನ ಹುಲಿಯ ನೃತ್ಯಕ್ಕೆ ವಿಶೇಷ ಪ್ರಾಧ್ಯಾನತೆ ನೀಡುವುದರೊಂದಿಗೆ ನಮ್ಮ ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕುಂದಾಪುರ ಟಿಟಿ ರಸ್ತೆಯ ಚರಣ್ ನೇತೃತ್ವದಲ್ಲಿ ಟೈಗರ್ಸ್ ತಂಡದವರು ಸುಮಾರು ಒಂದು ಗಂಟೆಗಳ ಕಾಲ ಹುಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರನ್ನು ಮನರಂಜಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






