ಮದುವೆಯಾಗಿ ಎರಡು ಮಕ್ಕಳು ಇದ್ದರೂ, ಮತ್ತೊಬ್ಬನ ಸಹವಾಸ ಮಾಡಿ ಮನೆ ಬಿಟ್ಟು ಓಡಿ ಹೋದಾಕೆಯ ಕಥೆ ಇದು…?!

Views: 1
ಪರಪುರುಷ ಅಥವಾ ಪರ ಸ್ತ್ರೀಯರ ಮೇಲಿನ ಆಸೆಯಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವವರ ಸಂಖ್ಯೆ ದಿನ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಘಟನೆ ದಾಖಲಾಗಿದ್ದು ಹಾಸನದ ರಾಜಕುಮಾರ ನಗರದಲ್ಲಿ ವಾಸ ಮಾಡುತ್ತಿದ್ದ ಇರ್ಫಾನ್ ಕೆಲವು ವರ್ಷಗಳ ಹಿಂದೆ ಶುಭಮನ್ ಸುಲ್ತಾನ್ ಎಂಬಾಕೆಯನ್ನು ಮದುವೆಯಾಗಿದ್ದನು.
ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ಈ ದಂಪತಿಗಳಿಗೆ ಮಗು ಕೂಡ ಜನಿಸಿತ್ತು ಹೀಗೆ ಬಹಳ ಒಳ್ಳೆಯ ರೀತಿಯಲ್ಲಿ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಂತಹ ದಂಪತಿಗಳ ಮಧ್ಯೆ ವೈಮನಸ್ಸು ಮೂಡಲು ಪ್ರಾರಂಭವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಇರ್ಫಾನ್ ಪತ್ನಿ ಸುಲ್ತಾನ ಬೇರೊಬ್ಬ ಗಂಡಸಿನ ಜೊತೆಗೆ ಸಂಬಂಧ ಬೆಳೆಸಿದ್ದು, ಮನೆಯಲ್ಲಿ ಸ್ವರ್ಗವನ್ನೇ ಧರೆಗಿಳಿಸುವಂತಹ ಪತಿ ಇದ್ದರು ಕೂಡ ಸುಲ್ತಾನ ಇಸ್ಮೈಲ್ ಎಂಬುವನ ಪರಿಚಯ ಮಾಡಿಕೊಳ್ಳುತ್ತಾಳೆ.
ಇವರಿಬ್ಬರ ಪರಿಚಯ ಕಾಲಕ್ರಮೇಣ ಪ್ರೀತಿಗೆ ತಿರುಗಿ ಮನೆಯಲ್ಲಿ ಪತಿ ಇಲ್ಲದಂತಹ ಸಮಯದಲ್ಲಿ ಇಬ್ಬರು ಏಕಾಂತವಾಗಿ ಕಾಲ ಕಳೆಯುತ್ತಿದ್ದರು. ಹೀಗೊಂದು ದಿನ ತಾವು ಜೀವನ ಪರಿಯಂತ ಒಂದಾಗಿ ಇರಬೇಕೆಂದು ನಿರ್ಧಾರ ಮಾಡಿ ಸುಲ್ತಾನ ಮತ್ತು ಇಸ್ಮೈಲ್ ಇಬ್ಬರು ಮನೆ ಬಿಟ್ಟು ಓಡಿ ಹೋಗುವ ನಿರ್ಧಾರ ಮಾಡುತ್ತಾರೆ.
ಅದರಂತೆ ಎರಡು ಮಕ್ಕಳ ತಾಯಿ ಪ್ರಿಯಕರನಿಗೋಸ್ಕರ ಮನೆ ಬಿಟ್ಟು ಬಂದಳು, ಈ ವಿಚಾರ ಆಕೆಯ ಹೆತ್ತವರು ಹಾಗೂ ಅತ್ತೆಯ ಮನೆಯವರಿಗೆಲ್ಲಾ ತಿಳಿದು ಇತರರಿಗೆ ಗೊತ್ತಾದರೆ ನಮ್ಮ ಮರ್ಯಾದೆ ಹೋಗುತ್ತದೆ ಎಂದು ಅಂಜಿ ಆಕೆಯನ್ನು ಮತ್ತೆ ಮನೆಗೆ ತರುವ ಪ್ರಯತ್ನ ಮಾಡಿದ್ದಾರೆ.ಹಿರಿಯರೆಲ್ಲರೂ ಒಟ್ಟಾಗಿ ಸೇರಿ ಚರ್ಚಿಸಿ ಆಕೆಯನ್ನು ಕ್ಷಮಿಸಿ ಮತ್ತೊಂದು ಅವಕಾಶ ಕೊಡಲು ನಿರ್ಧರಿಸಿದರು, ಹೀಗೆ ಆಕೆ ಕೂಡ ನಡೆದಿದ್ದನ್ನೆಲ್ಲ ಮರೆತು ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾಗ ಇಸ್ಮೈಲ್ ಮತ್ತೆ ಆಕೆಗೆ ಕಾಟ ಕೊಡಲು ಪ್ರಾರಂಭ ಮಾಡಿದನು.
ತನ್ನೊಂದಿಗೆ ಆಕ್ರಮ ಸಂಬಂಧ ಇಟ್ಟುಕೊಳ್ಳದೆ ಹೋದಲ್ಲಿ ನಮ್ಮಿಬ್ಬರ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನೆಲ್ಲ ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ. ಇದಕ್ಕೆ ಅಂಜಿದಂತಹ ಸುಲ್ತಾನ ಮನೆ ಮಂದಿಯಲ್ಲ ನಮಾಜ್ ಗೆಂದು ಹೊರಹೊದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸದ್ಯ ಈ ಒಂದು ಪ್ರಕರಣವು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.






