ಸಾಲು ಸಾಲು ರಜೆ.. ಖಾಸಗಿ ಬಸ್ ದರ ಮೂರು ಪಟ್ಟು ಏರಿಕೆ; ಊರಿಗೆ ತೆರಳಲು ಸಜ್ಜಾದ ಜನರಿಗೆ ಟಿಕೆಟ್ ಶಾಕ್!

Views: 0
ನಾಡಹಬ್ಬ ದಸರಾ ಹಬ್ಬದ ಖುಷಿಯಿಂದ ವೀಕೆಂಡ್ ಬಂದಿರುವುದರಿಂದ ಸಾಲು ಸಾಲು ರಜೆ ಸಿಕ್ಕಿದೆ ಇದರ ಬೆನ್ನಲ್ಲೇ ಟಿಕೆಟ್ ಶಾಕ್ ಹೊಡೆದಿದೆ.

ವಿದ್ಯಾರ್ಥಿಗಳಿಗೆ ದಸರಾ ರಜೆ ನೀಡಲಾಗಿದ್ದು, ಖಾಸಗಿ ಕಂಪನಿಯವರಿಗೆ ಅ.21ರಿಂದ ಅ.24ರ ವರೆಗೆ ಸರಣಿ ರಜೆ ಇರುವುದರಿಂದ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಇದರ ಬೆನ್ನಲ್ಲೇ ಖಾಸಗಿ ಬಸ್ ಗಳ ಟಿಕೆಟ್ ದರ ಮೂರು ಪಟ್ಟು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಖಾಸಗಿ ಬಸ್ ಗಳು ಪ್ರಯಾಣಿಕರ ಸುಲಿಗೆಗೆ ಮುಂದಾಗಿದೆ.
ಖಾಸಗಿ ಬಸ್ ಕಂಪನಿಯವರು ಮೂರು ಪಟ್ಟು ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನೈಜ ದರದ ಮೂರು ಪಟ್ಟು ಟಿಕೆಟ್ ದರವನ್ನು ಹೆಚ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಾರಿಗೆ ಇಲಾಖೆ ಎಚ್ಚರಿಸಿದರೂ ಬಗ್ಗದ ಖಾಸಗಿ ಬಸ್ ಮಾಲಕರು
ಸಾರಿಗೆ ಇಲಾಖೆಗೆ ಖಾಸಗಿ ಬಸ್ ಟಿಕೆಟ್ ದುಬಾರಿ ಬಗ್ಗೆ ಸಾಲು ಸಾಲು ದೂರು ಬಂದ ಹಿನ್ನೆಲೆಯಲ್ಲಿ ಬಸ್ ಮಾಲೀಕರು ಹಾಗೂ ಆನ್ ಲೈನ್ ಟಿಕೆಟ್ ನೀಡುವ ವಿತರಕರಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ಮೇಲೆ ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಹೆಚ್ಚುವರಿ ಟಿಕೆಟ್ ತೆಗೆದುಕೊಂಡ್ರೆ ಕ್ರಮ ಕೈಗೊಳ್ಳಲಾಗುತ್ತದೆ. ಬಸ್ ಮಾಲೀಕರು ಹಾಗೂ ಟಿಕೆಟ್ ವಿತರಕರ ವಿರುದ್ಧ ಕಾನೂನು ರೀತಿ ಕ್ರಮ ಎಚ್ಚರಿಕೆ ನೀಡಲಾಗಿದೆ..






