ಸಾಂಸ್ಕೃತಿಕ

“ಚೋರಿ ಚೋರಿ ಚುಪ್ಕೆ ಚುಪ್ಕೆ” ಖ್ಯಾತಿಯ ಹಿರಿಯ ನಟಿ ಭೈರವಿ ವೈದ್ಯ ನಿಧನ

Views: 54

ಸುಮಾರು ಆರು ತಿಂಗಳಿನಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಇವರು, ಅಕ್ಟೋಬರ್ 8 ರಂದು ತಮ್ಮ 67ನೇ ವಯಸ್ಸಿನಲ್ಲಿ ಅಗಲಿದ್ದಾರೆ.

ಭೈರವಿ ಅವರ ಮಗಳು ಜಾನಕಿ ವೈದ್ಯ ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ನೀನು ನನ್ನ ಪಾಲಿಗೆ ಅಮ್ಮ ಜೊತೆಗೆ ಎಲ್ಲವೂ. ನೀವು ಕಲರ್​ಫುಲ್​, ಫಿಯರ್​ಲೆಸ್​. ನೀವು ಮಕ್ಕಳನ್ನು ಬೆಳೆಸುವುದರ ಜೊತೆಗೆ ಅವರ ಕನಸನ್ನು ಈಡೇರಿಸುವ ರೀತಿ ಮಾಡಿದೆ’ ಎಂದು ಮಗಳು ಜಾನಕಿ ವೈದ್ಯ ಭಾವುಕವಾಗಿ ಬರೆದುಕೊಂಡಿದ್ದಾರೆ.

ಭೈರವಿ ಕಳೆದ 45 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗುಜರಾತಿ, ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದರು.

ಕೊನೆಯದಾಗಿ ಅವರು ‘ನಿಮಾ ಡೆನ್ಜಾಂಗ್ಪಾ’ ಎಂಬ ಶೋನಲ್ಲಿ ಕಾಣಿಸಿಕೊಂಡು ಎಲ್ಲರ ಮನೆ ಮಾತಾಗಿದ್ದರು.

ಭೈರವಿ ಅವರು ಪ್ರಸಿದ್ಧ ರಂಗಭೂಮಿ ಕಲಾವಿದೆಯಾಗಿದ್ದು, ಹಲವು ನಾಟಕಗಳಲ್ಲಿ ನಟಿಸಿದ್ದಾರೆ.

Related Articles

Back to top button
error: Content is protected !!