ಕುಂದಾಪುರ: ಕೆದೂರು-ಶಾನಾಡಿ ಪರಿಸರದಲ್ಲಿ ಹೆಣ್ಣು ಚಿರತೆ ತನ್ನೆರಡು ಮರಿಗಳೊಂದಿಗೆ ಪ್ರತ್ಯಕ್ಷ ; ಭಯಭೀತರಾದ ಜನರು
ಈ ಹಿಂದೆ ಇಲ್ಲಿನ ಜನರ ದನ, ಕರು,ಸಾಕು ನಾಯಿಯನ್ನು ಚಿರತೆ ದಾಳಿ ಮಾಡಿ ಹೊತ್ತೊಯ್ದಿದ್ದು, 2018 ರಿಂದ ಇಲ್ಲಿವರೆಗೆ ಮಾಲಾಡಿ ಎಂಬಲ್ಲಿ ಒಂದೇ ಸ್ಥಳದಲ್ಲಿ ಎಂಟು ಚಿರತೆಯನ್ನು ಬೋನಿನಲ್ಲಿ ಸೆರೆಯಾಗಿಸುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

Views: 7
ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾನಾಡಿಯ ರೈಸ್ ಮಿಲ್ ಹಿಂಬಾಗದಲ್ಲಿ ಹೆಣ್ಣು ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ಶನಿವಾರ ಪ್ರತ್ಯಕ್ಷಗೊಂಡಿದ್ದು ಈ ಭಾಗದ ನಾಗರಿಕರು ಆತಂಕಗೊಂಡಿದ್ದಾರೆ.
ಹೂವಿನಕೆರೆ ವಾದಿರಾಜ ಮಠದ ಹತ್ತಿರ ನೂರಾರು ಎಕರೆ ಗೇರು ಪ್ಲಾಂಟೇಶನ್ ನಿರ್ಜನವಾದ ಪ್ರದೇಶದಲ್ಲಿ ವಾಹನ ಸವಾರರಿಗೆ ಚಿರತೆ ಆಗಾಗ ರಸ್ತೆ ದಾಟಿರುವುದು ಅನೇಕರು ನೋಡಿ ಭಯಭೀತರಾಗಿದ್ದಾರೆ.

ಇದೀಗ ಕಪ್ಪು ಚಿರತೆಯೊಂದು ಕಳೆದ ಮೂರು ವರ್ಷಗಳಿಂದ ಇದೇ ಪರಿಸರದಲ್ಲಿ ಓಡಾಡುತ್ತಿದ್ದು, ರಾತ್ರಿ ವೇಳೆಯಲ್ಲಿ ಅಲ್ಲಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಕಪ್ಪು ಚಿರತೆಯನ್ನು ನೋಡಿದ ಜನರು ಭಯಭೀತರಾಗಿದ್ದಾರೆ.
ಬೆಂಗಳೂರಿನ ಉದ್ಯಮಿಯೊಬ್ಬರು ರಾತ್ರಿ ಹೊತ್ತು ಕಾರಿನಲ್ಲಿ ಬರುವಾಗ ಕಟ್ಕೇರೆ ಎಂಬಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿದ್ದು
ಸಂಜೆಯ ನಂತರ ತಿರುಗಾಟ ಮತ್ತು ಬೆಳಿಗ್ಗೆ ವಾಕಿಂಗ್ ಮಾಡುವುದನ್ನು ಜನರು ನಿಲ್ಲಿಸಿದ್ದಾರೆ.
.ಆತಂಕ ಗೊಂಡಿರುವ ಇಲ್ಲಿಯ ನಾಗರಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿದು ಜನರಲ್ಲಿ ಕಾಡುತ್ತಿರುವ ಭಯವನ್ನು ದೂರ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕಿ ಮಾಲತಿ.ಎಚ್, ಅರಣ್ಯ ವೀಕ್ಷಕ ಸೋಮಣ್ಣ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹಿಡಿಯಲು ಬೋನ್ ಇರಿಸಿ ಸೆರೆ ಹಿಡಿಯದಾಗಿ ಭರವಸೆ ನೀಡಿದ್ದಾರೆ.
ಚಿತ್ರಗಳು ಸಾಂದರ್ಭಿಕ






